ಹಾವೇರಿ: ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಬಸವರಾಜ ಬೊಮ್ಮಾಯಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹುಬ್ಬಳ್ಳಿಯ ರೈಲು ಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಾವೇರಿ&ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಕಾಮಗಾರಿಗಳ ನಿರ್ಮಾಣ ಹಾಗೂ ಪ್ರಗತಿ ಪರಿಶೀಲನಾ ಸಭೆದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ರೈಲು ಮಾರ್ಗಗಳಲ್ಲಿ ಯಲವಿಗಿ, ಹಾವೇರಿ,- ಬ್ಯಾಡಗಿ, ರಾಣೆಬೆನ್ನೂರ ಹಾಗೂ- ಚಳಗೇರಿ ರೈಲ್ವೆ ಸ್ಟೇಷನ್ ನವೀಕರಣ, ಲೆ$್ಮಶ್ವರ - ಸವಣೂರ ಮಧ್ಯೆ ಯಲವಿಗಿ ಹತ್ತಿರದ ರೈಲ್ವೆ ಸೇತುವೆ, ರಾಣೆಬೆನ್ನೂರ -& ಶಿಕಾರಿಪುರ ನೂತನ ರೈಲ್ವೆ ಮಾರ್ಗ ಭೂ ಸ್ವಾಧಿನ ಮಾಡುವುದು, ರಾಣೆಬೆನ್ನೂರ ತಾಲೂಕ ಕೋನಬೇವು -ಶಿಡಗನಾಳ ಮಧ್ಯೆ ರೇಲ್ವೆ ಸೇತುವೆ ನಿರ್ಮಾಣ, ಸವಣೂರ ತಾಲೂಕು ಯಲವಿಗಿ ಗ್ರಾಮದ ಹತ್ತಿರ ಸದ್ಯದ ಕೆಳ ಸೇತುವೆ ಬದಲಾಗಿ ಮೇಲ್ಸೇತುವೆ ನಿರ್ಮಾಣ ಮಾಡಲು ಸೂಚಿಸಿದರು.
ಜನಶತಾಬ್ದಿ, ಕಿತ್ತೂರ ರಾಣಿ ಚನ್ನಮ್ಮ, ಯಶವಂತಪುರ,- ವಾಸ್ಕೋ ಎಕ್ಸಪ್ರೆಸ್, ಮಂಗಳೂರ& ವಿಜಯಪುರ ಎಕ್ಸಪ್ರೆಸ್ ರೈಲನ್ನು ಯಲವಿಗಿ ಸ್ಟೇಷನ್ನಲ್ಲಿ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.
ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಗದಗ-&ಹೊಂಬಳ ರಸ್ತೆಯಲ್ಲಿರುವ ರೈಲ್ವೆ ಸೇತುವೆ, ಗದಗ&ಯಲವಿಗಿ ನೂತನ ರೈಲ್ವೆ ಮಾರ್ಗ, ಮುಂಡರಗಿ ತಾಲೂಕ ಹಳ್ಳಿಕೇರಿ ಹತ್ತಿರ ಕೆಳ ಸೇತುವೆ ನಿರ್ಮಾಣ, ಗದಗ, ಗಜೇಂದ್ರಗಡ, ವಾಡಿ ಮಾರ್ಗ ಕಾಮಗಾರಿ, ಗದಗ- ಬೆಟಗೇರಿ ಮಧ್ಯೆ ಬಳ್ಳಾರಿ ಗೇಟ್ ಕೆಳಭಾಗದ ಸೇತುವೆ ದುರಸ್ತಿ, ಗದಗ ನವಲಗುಂದ -ನರಗುಂದ ರೈಲ್ವೆ ಕಾಮಗಾರಿಗೆ ನಕ್ಷೆ ತಯಾರಿಸಿ ಅನುಮೋದನೆ ಪಡೆಯಬೇಕು ಎಂದರು.
ಕಣವಿ ಗ್ರಾಮದ ಹುಲಕೋಟಿ ಯಲವಿಗಿ ಹೊಸ ರೈಲುಗಳ ಸರ್ವೇ ಮಾಡಿದ್ದು ಈ ಸ್ಥಳ ಬದಲಾವಣೆ ಕುರಿತು ಸಾರ್ವಜನಿಕರಿಂದ ಮನವಿ ಬಂದಿದ್ದು ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗದಗ ಪಟ್ಟಣದ ಗಂಗಾಪುರ ಪೇಟೆಯ ಗೇಟ್ ನಂ. 2ಎ ಗೆ ಮೇಲ್ಸೇತುವೆ ಕಾಮಗಾರಿ ರ್ಪೂಣಗೊಳಿಸಬೇಕು. ಗದಗ&ಶಿರಹಟ್ಟಿ&ಯಲವಿಗಿ ರೈಲ್ವೆ ಮಾರ್ಗ ಕಾಮಗಾರಿ ಭೂ ಸ್ವಾಧಿನ ಪ್ರಕ್ರಿಯೆ ಪ್ರಾರಂಭಿಸಬೇಕು. ಗದಗ&ಹರಪನಹಳ್ಳಿ ನೂತನ ರೈಲು ಮಾರ್ಗ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೈರುತ್ಯ ರೈಲ್ವೆ ಲಾಖೆಯ ಜನರಲ್ ಮ್ಯಾನೇಜರ್ ಅರವಿಂದ ವಾಸ್ತವ ಮತ್ತು ಇಲಾಖೆಯ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.