ನ್ಯೂಸ್

ಶೀಲ ಶಂಕಿಸಿ ಪತ್ನಿಯನ್ನು ಕೊಂದು ತಾನೂ ನೇಣಿಗೆ ಶರಣಾದ ಪತಿ..

ಹಾವೇರಿ: ಶೀಲ ಶಂಕಿಸಿ ಪತ್ನಿಗೆ ಮಚ್ಚಿನಿಂದ ಹೊಡೆದು ಭೀಕರವಾಗಿ ಕೊಲೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ತಾಲೂಕಿನ ಸಂಗೂರ ಗ್ರಾಮದಲ್ಲಿ ನಡೆದಿದೆ.

ದ್ರಾಕ್ಷಾಯಣೆವ್ವ (45) ಹತ್ಯೆಗೀಡಾದವಳು. ಆಕೆಯ ಪತಿ ಪ್ರಭು ವಾರತಿ (52) ಆತ್ಮಹತ್ಯೆ ಮಾಡಿಕೊಂಡವ.

ಹೆಂಡತಿ ಮೇಲಿನ ಅನುಮಾನದಿಂದ ಗಂಡ ನಿತ್ಯ ಜಗಳವಾಡುತ್ತಿದ್ದ. ಮಂಗಳವಾರ ರಾತ್ರಿಯೂ ಜಗಳ ವಿಕೋಪಕ್ಕೆ ತಿರುಗಿದಾಗ ಮಚ್ಚಿನಿಂದ ಪತ್ನಿಯ ಕೊಂದು, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಎಸ್‌ಪಿ‌ ಡಾ.ಶಿವಕುಮಾರ ಗುಣಾರೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.