ನ್ಯೂಸ್

ಎಂಆರ್‌ಎಂ ಸ್ಕೂಲ್‌ಗೆ ಶೇ. 100ರಷ್ಟು ಫಲಿತಾಂಶ

ಹಾವೇರಿ: ನಗರದ ಎಂಆರ್‌ಎಂ ರೆಸಿಡೆನ್ಸಿಯಲ್ ಸ್ಕೂಲ್‌ನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ. 100ರಷ್ಟಾಗಿದೆ.
ವಿದ್ಯಾರ್ಥಿನಿ ಸಿಮ್ರನ್ ಗಣಜೂರ ಶೇ. 95.36ರಷ್ಟು ಅಂಕಗಳಿಸಿ ಶಾಲೆಗೆ ಪ್ರಥಮ, ನೂರಜಹಾನ್ ರೇಹಮಾನ್ ಶೇ. 82.72ರಷ್ಟು ಅಂಕಗಳಿಸಿ ದ್ವಿತೀಯ, ಗೌಸಿಯಾಬಾನು ಬೇಪಾರಿ ಶೇ. 82.08ರಷ್ಟು ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ರಾಮ ಮೋಹನ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.