oppo_34 
ನ್ಯೂಸ್

ಶಿಷ್ಯರನ್ನು ಸಂಸ್ಕಾರದ ಕಡೆಗೆ ಸಾಗಿಸುವುದೇ ಗುರುವಿನ ಕರ್ತವ್ಯ; ಸದಾಶಿವ ಶ್ರೀ

ಹಾವೇರಿ: ಆಧ್ಯಾತ್ಮಿಕ ಶಿಸ್ತಿನ ಮೊದಲ ಹೆಜ್ಜೆಯೇ ಮೌನ ಅನುಷ್ಠಾನ. ಅನುಷ್ಠಾನದಿಂದ ಪಡೆದ ವಿಶೇಷ ಶಕ್ತಿಯು ಶಿವತ್ವ ಸಾಧನೆಯಾಗಿದೆ. ಈ ಸಾಧನೆಯಿಂದ ಶಿಷ್ಯರನ್ನು ಅಜ್ಞಾನದಿಂದ ಸಂಸ್ಕಾರ ಕಡೆಗೆ ಸಾಗಿಸುವದೇ ಗುರು ಪರಂಪರೆಯ ಆದ್ಯ ಕರ್ತವ್ಯವಾಗಿದೆ ಎಂದು ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠ ಶಿವಾನುಭವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸದಾಶಿವ ಸ್ವಾಮೀಜಿಯವರ ಮೌನ ಅನುಷ್ಠಾನ ಮಂಗಲ ಹಾಗೂ ಗುರು ಪೂಣಿರ್ಮೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಗತ್ತನಲ್ಲಿ ಯಾವುದೇ ದೇಶದಲ್ಲಿಯೂ ಕಂಡ ಬರದ ಗುರುಕುಲ ಶಿಣ ಪದ್ಧತಿಯು ನಮ್ಮ ದೇಶದಲ್ಲಿದೆ. ವ್ಯಾಸ ಮಹಷಿರ್ಯ ಪೂಣಿರ್ಮೆಯು ಗುರು ಪೂಣಿರ್ಮೆಯಾಗಿದ್ದು, ಧಾಮಿರ್ಕ ಪರಂಪರೆಯ ಗುರು ಸಾನ್ನಿಧ್ಯವು ಮೌಂಸ ದೇಹವನ್ನು ಮಂತ್ರ ದೇಹವನ್ನಾಗಿ ಮಾಡುವ ಶಕ್ತಿಯಿದೆ. ಶಿಷ್ಯನು ದೊಡ್ಡ ಸ್ಥಾನಕ್ಕೆ ಹೋದಾಗ ಗುರುವಿನ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇದು ಗುರು ಶಿಷ್ಯ ಪರಂಪರೆಯ ಪವಿತ್ರ ಸಂಬಂಧವಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ಮೌನ ಅನುಷ್ಠಾನದ ಬಲದಿಂದ ಗಳಿಸುವ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಬಳಸಿ, ಸಮಾಜದ ಉದ್ಧಾರವೇ ಮಹಾತ್ಮರ ಜೀವನದ ಪರಮ ಗುರಿ ಎಂದು ಭಾವಿಸುವ ಪರಂಪರೆಯು ಹಾವೇರಿಯ ಹುಕ್ಕೇರಿಮಠದ ಆಧ್ಯಾತ್ಮಿಕ ಸಂಪತ್ತು ಆಗಿದೆ ಎಂದರು.
ಶಿವಾನಂದ ನಾಗನೂರ ವಿರಚಿತ ಕವನ ಸಂಕಲನ "ಸ್ವಾತಂತ್ರ$್ಯ ಮರ' ಲೋಕಾರ್ಪಣೆಗೊಳಿಸಲಾಯಿತು. ನಿವೃತ್ತಿ ಹೊಂದಿದ ಮುಖ್ಯಶಿಕ್ಷಕಿ ರೇಣುಕಾ ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾಥಿರ್ಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಗುರು ಪೂಣಿರ್ಮೆ ನಿಮಿತ್ತ ಸದಾಶಿವ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಲಾಯಿತು.
ಶಿವಯೋಗ ಮಂದಿರದ ಟ್ರಸ್ಟಿ ಎಂ.ಬಿ. ಹಂಗರಕಿ ಹಾಗೂ ಗದಗನ ಶಿವಯೋಗಿ ದೇವರು ಮಾತನಾಡಿದರು.
ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಆಸಂಗಿಯ ವೀರಬಸವ ದೇವರು, ಶಿವಪ್ರಕಾಶ ದೇವರು, ಚಂದ್ರಶೇಖರ ದೇವರು, ವೀರಣ್ಣ ಅಂಗಡಿ, ಬಿ. ಬಸವರಾಜ, ಆನಂದ ಅಟವಾಳಗಿ, ಪ್ರಾಚಾರ್ಯ ಎಸ್​.ವಿ. ಹಿರೇಮಠ, ಟಾ. ಸವಿತಾ ಹಿರೇಮಠ, ದಾಾಯಣಿ ಗಾಣಗೇರ, ಅಮೃತಮ್ಮ ಶೀಲವಂತರ, ಎಸ್​.ಎಂ. ಹಾಲಯ್ಯನವರಮಠ ಮತ್ತಿತರರು ಉಪಸ್ಥಿತರಿದ್ದರು.
ಎಸ್​.ಎಸ್​. ಮುಷ್ಠಿ ಸ್ವಾಗತಿಸಿದರು. ಪಿ.ಡಿ. ಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್​.ಎನ್​. ಮಳೆಪ್ಪನವರ ನಿರ್ವಹಿಸಿದರು. ವಿ.ವಿ. ಅಂಗಡಿ ವಂದಿಸಿದರು.