ನ್ಯೂಸ್

ಚಿಂತಾಜನಕ ಸ್ಥಿತಿಯಲ್ಲಿದ್ದ ಅವಳಿ ಮಕ್ಕಳ ಜೀವ ಉಳಿಸಿದ 108 ಸಿಬ್ಬಂದಿ: 80 ಕಿಮೀ ದೂರದ ಹುಬ್ಬಳ್ಳಿಗೆ ತಲುಪಿದ್ದು ಕೇವಲ 40 ನಿಮಿಷದಲ್ಲಿ!

ಹಾವೇರಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಮತ್ತು ಚಿಂತಾಜನಕ ಸ್ಥಿತಿಯಲ್ಲಿದ್ದ ಅವಳಿ ಮಗುಗಳ ಜೀವವನ್ನು 108 ಸಿಬ್ಬಂದಿ ಕಾಪಾಡಿದ್ದಾರೆ.

ಹುಟ್ಟಿದಾಕ್ಷಣವೇ ಕಣ್ಣು ಮುಚ್ಚಬೇಕಿದ್ದ ಅವಳಿ ಮಗುಗಳು ಮತ್ತು ತಾಯಿಯನ್ನು ಝಿರೋ ಟ್ರಾಫಿಕ್ ಮೂಲಕ 80 ಕಿಲೋ ಮೀಟರ್ ದೂರದ ಹುಬ್ಬಳ್ಳಿಗೆ ಕೇವಲ 40 ನಿಮಿಷದಲ್ಲಿ ತಲುಪಿಸಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಗುವಿಗೆ ಲಕ್ಷ್ಮೀ ಯಲ್ಲಪ್ಪ ದೇವಿಹೊಸೂರು ಎಂಬುವವರು ಸೋಮವಾರ ಜನ್ಮ ನೀಡಿದರು. ಆ ಅವಳಿ ಮಕ್ಕಳು ಬದುಕುವುಳಿಯುವದು ಕಷ್ಟ ಹುಬ್ಬಳ್ಳಿ ಆಸ್ಪತ್ರೆಗೆ ಒಯ್ಯಲು ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ.

ವೈದ್ಯರ ಸಲಹೆಯಂತೆ 108 ಆ್ಯಂಬುಲೆನ್ಸ್​ನ್ನು ಕರೆಸಲಾಗಿದೆ. ಅದರಲ್ಲಿ ಶುಶ್ರೂಷಕ ಕುಮಾರ ಮತ್ತು ಪೈಲೆಟ್ ತೌಪಿಕ್ ಪಠಾಣ್ ಎಂಬುವ ಸಿಬ್ಬಂದಿ ಇದ್ದು, ಇವರೇ ತಾಯಿ ಮಕ್ಕಳನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ದವರು. ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಅವಳಿ ಮಗುಗಳು ಮತ್ತು ತಾಯಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯ ಅವಳಿ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.