ಹಾವೇರಿ: ಕನ್ನಡ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗಿರುವುದರಿಂದಲೇ ಕನ್ನಡ ಶಾಲೆಗಳು ಸೊರಗುತ್ತಿವೆ. ಭಾಷೆ ಬೆಳೆದರೆ ಸಾಹಿತ್ಯ ಬೆಳೆಯಲು ಸಾಧ್ಯ. ಕವಿಗಳಿಗೆ ನಿರಂತರವಾದ ಅಭ್ಯಾಸ ಬೇಕು. ಹಾಗಾದಾಗ ಮಾತ್ರ ಭಾವ ಜಗತ್ತಿನ ಕಾವ್ಯ ಸೃಷ್ಟಿಸಲು ಸಾಧ್ಯವೆಂದು ಹಿರಿಯ ಲೇಖಕ ಪ್ರೊ. ಕೋರಗಲ್ಲ ವಿರೂಪಾಕ್ಷಪ್ಪ ಹೇಳಿದರು.
ನಗರದ ಹೊರ ವಲಯದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ನ ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಶನಿವಾರ ಹಾವೇರಿ ಹೋಬಳಿ ಘಟಕದ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಅನೇಕ ಯುವ ಕವಿಗಳ ಅಶ್ಲೀಲ ಕವಿತೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ವಿಕಾರ ಭಾವವನ್ನು ಹುಟ್ಟಿಸುವ ಇಂತಹ ಕಾವ್ಯ ಸಲ್ಲ, ಎಂದು ಹೇಳಿ ಕುಮಾರವ್ಯಾಸನ ಸಭಾಪರ್ವದ ಕಾವ್ಯವಾಚಿಸಿ ದ್ರೌಪದಿಯ ಶೃಂಗಾರ ವರ್ಣಯ ಭಾಗಗಳನ್ನು ಓದಿ ತೋರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಹೊಸದಾಗಿ ನಿಮಾರ್ಣವಾಗುತ್ತಿರುವ ಸಾಹಿತ್ಯ ಭವನದಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯಬೇಕು. ಪರಿಷತ್ ಉಚಿತವಾಗಿ ವ್ಯವಸ್ಥೆ ಮಾಡಿ ಕೊಡುತ್ತಿದೆ.
ಕನ್ನಡ ಸೇವಾಥಿರ್ಗಳಾದ ವಾಣಿ ಮತ್ತು ಅಕ್ಕಮಹಾದೇವಿ ನೀರಲಗಿ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಹಿರಿಕಿರಿ ಕವಿಗಳಾದ ಸಿ.ಎಸ್. ಮರಳಿಹಳ್ಳಿ, ಕೆ.ಆರ್. ಹಿರೇಮಠ, ಜುಬೇದಾ ನಾಯಕ್, ಶಿವಯೋಗಿ ಚರಂತಿಮಠ, ಅರುಣ ಬಂಕಾಪೂರ, ಮಣಿಕಂಠ ಗೊದಮನಿ, ಅಕ್ಕಮಹಾದೇವಿ ನೀರಲಗಿ, ನೀಲಕಂಠಯ್ಯ ಓದಿಸೋಮಠ, ಗುಡ್ಡಪ್ಪ ಚಟ್ರಮ್ಮನವರ, ಶಶಿಕಲಾ ಅಕ್ಕಿ, ಸುರೇಖಾ ನೇರಳಿಕರ, ಮೇಘನಾ ಟಿ.ಎಸ್. ಅಕ್ಕಮಹಾದೇವಿ ಹಾನಗಲ್ಲ, ನೇತ್ರಾ ಅಂಗಡಿ, ಭಾರತಿ ಯಾವಗಲ್, ರೇಣುಕಾ ಗುಡಿಮನಿ, ಶಿವರಾಜ ಅರಳಿ, ಜಯಶ್ರೀ ಬುಡಪನಹಳ್ಳಿ, ಎಸ್.ವ್ಹಿ. ಬಾಕಿರ್ ಹಾಗೂ ಜ್ಯೋತಿ ಬಿಶೆಟ್ಟಿಯವರ ಸೇರಿ 30ಕ್ಕೂ ಹೆಚ್ಚು ಕವಿಗಳು ಕಾವ್ಯವಾಚನ ಮಾಡಿದರು.
ಹೋಬಳಿ ಘಟಕದ ನೂತನ ಅಧ್ಯೆ ಡಾ. ಗೀತಾ ಸುತ್ತಕೋಟಿ, ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ, ಕಸಾಪ ತಾಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಜಿಲ್ಲಾ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡರ, ಸತೀಶ ಕುಲಕಣಿರ್, ರಾಜೇಂದ್ರ ಹೆಗಡೆ, ನಾಗರಜ ಹುಡೇದ, ಎಚ್.ಆರ್. ಹೊಸಮನಿ, ಚಂದ್ರಪ್ಪ ಸನದಿ ಮತ್ತಿತರರು ಉಪಸ್ಥಿತರಿದ್ದರು.