ನ್ಯೂಸ್

ಧ್ಯಾನ ವ್ಯಾಯಾಮದಿಂದ ಮಾನಸಿಕ ದೃಢತೆ ಪಡೆಯಿರಿ; ಸುಚೇತನ

Haveri - Kariyappa Aralikatti

ಹಾವೇರಿ: ಪ್ರತಿಯೊಬ್ಬ ಮಾನವನಲ್ಲಿ ದೈವಿಕ ಶಕ್ತಿ ಇರುತ್ತದೆ. ಅದನ್ನು ಸಮರ್ಪಕವಾಗಿ ಸತ್ಕಾರ್ಯಕ್ಕೆ ಬಳಸಿಕೊಂಡರೆ ಬದುಕಿನಲ್ಲಿ ಅದ್ಭುತಗಳು ಜರುಗುತ್ತವೆ. ವಿಶೇಷವಾಗಿ ವಿದ್ಯಾಥಿರ್ನಿಯರು ನಿತ್ಯ ಧ್ಯಾನ, ವ್ಯಾಯಾಮ ಮತ್ತು ಸದ್ಗುಣಗಳನ್ನು ಅಭ್ಯಾಸ ಮಾಡಿಕೊಂಡರೆ ದೈಹಿಕ ಮತ್ತು ಮಾನಸಿಕವಾಗಿ ದೃಢತೆ ಪಡೆಯಬಹುದು. ನಿಮ್ಮ ಸಾಧನೆಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ವಿವೇಕ ಜಾಗೃತಿ ಬಳಗದ ಉಪನ್ಯಾಸಕಿ ಸುಚೇತನ ಬಧರಿನಾಥ ಹೇಳಿದರು.

ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಜಾಗೃತಿ ಬಳಗ, ಡಿವೈನ್​ ಪಾರ್ಕ್​, ಸಾಲಿಗ್ರಾಮ, ಉಡುಪಿ ಜಿಲ್ಲೆಯ ಹಾವೇರಿ ಘಟಕದ ವತಿಯಿಂದ ಏರ್ಪಡಿಸಿದ್ದ "ವಿದ್ಯಾಥಿರ್ ದೀಪ ಕಾರ್ಯಕ್ರಮ" ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪಂಚೇಂದ್ರಿಯಗಳಿಂದ ಗಳಿಸಿದ ಜ್ಞಾನವನ್ನು ಮೆದುಳಿನಲ್ಲಿ ಮನಸ್ಸು ಮತ್ತು ಬುದ್ಧಿಗಳಿಂದ ಸಂಸ್ಕರಿಸಿ ನಂತರ ಚಿತ್ತದಲ್ಲಿ ನೆಲೆಯಾಗುತ್ತವೆ.ಆದ್ದರಿಂದ ಯಾರು ಏಕಾಗ್ರತೆಯಿಂದ ಜ್ಞಾನವನ್ನು ಗಳಿಸುತ್ತಾರೊ ಅವರು ಅತ್ಯಂತ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸುತ್ತಾರೆ. ಪ್ರತಿಯೊಬ್ಬರಿಗೂ ಯಶಸ್ಸನ್ನು ಗಳಿಸಲು ಸಾಧ್ಯವಿದೆ. ನಮ್ಮ ಅಂತರಂಗದ ಸಂರ್ಪೂಣ ಶಕ್ತಿಯ ಪರಿಚಯವಿದ್ದರೆ ಮಾತ್ರ ಸಾಧ್ಯ. ವಿದ್ಯಾಥಿರ್ನಿಯರು ಉತ್ತಮ ವ್ಯಕ್ತಿತ್ವ ಮತ್ತು ಯಶಸ್ಸನ್ನು ಗಳಿಸಬೇಕಾದರೆ ತಮ್ಮ ಅಂತರಂಗದ ವಿಕಾಸಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ಸಾಂಸತಿಕ ಕಾರ್ಯದಶಿರ್ ಶೇಖರ ಭಜಂತ್ರಿ ಮಾತನಾಡಿ, ಸ್ವಾಮಿ ವಿವೇಕಾನಂದರು ಎಂದರೆ ನಮ್ಮ ಆಂತರ್ಯದ ಮತ್ತು ದೇಶದ ಅಂತ:ಶಕ್ತಿಯ ಪ್ರತಿಕ. ನಮ್ಮೊಳಗಿನ ಚೈತನ್ಯ ಶಕ್ತಿಯನ್ನು ಬಡಿದೆಚ್ಚರಿಸಿ ಸದಾ ಜಾಗೃತವಾಗಿರಿಸುವ ಅಪ್ರತಿಮ ಶಕ್ತಿಯ ವೀರ ಸನ್ಯಾಸಿ. ವ್ಯಕ್ತಿತ್ವ ನಿರ್ಮಾಣದಲ್ಲಿ ಬಾಹ್ಯ ವಿಕಾಸದ ಜೊತೆಗೆ ಆಂತರಿಕ ವಿಕಾಸಕ್ಕೆ ಹೆಚ್ಚು ಮಹತ್ವವನ್ನು ನೀಡಿದವರು. ಆದ್ದರಿಂದ ವಿದ್ಯಾಥಿರ್ನಿಯರು ವಿವೇಕ ಜಾಗೃತಿ ಬಳಗದ ವತಿಯಿಂದ ನೀಡಲಾಗುವ ಉಪಯುಕ್ತ ಮಾಹಿತಿಗಳನ್ನು ಪಡೆದು ಜಾರಿಗೆ ತರಬೇಕು. ಬಳಗ ನಾಡಿನ ಎಲ್ಲ ವಿದ್ಯಾಥಿರ್ಗಳನ್ನು ಕೇಂದ್ರೀಕರಿಸಿ ಇಂತಹ ಕಾರ್ಯಕ್ರಮಗಳ ಮೂಲಕ ವಿವೇಕಾನಂದರ ಚಿಂತನೆಗಳನ್ನು ಹರಡುತ್ತಿರುವುದು ಅತ್ಯಂತ ಔಚಿತ್ಯರ್ಪೂಣವಾಗಿದೆ ಎಂದರು.

ವಿವೇಕ ಬಳಗದ ಸದಸ್ಯೆರಾದ ಆರತಿ, ಶಾಂತಲಾ, ಸುಚೇತನ, ಸರ್ವಮಂಗಳ ತಳವಾರ, ಶೈಲಾ ಅಡವಿ, ಉಪನ್ಯಾಸಕರಾದ ರಮೇಶ ಲಂಬಾಣಿ, ಎಸ್​.ಸಿ. ಮರಡಿ, ರವಿ ಸಾದರ, ವಿ.ಎಸ್​. ಪಾಟೀಲ, ವಿ.ಟಿ. ಹೊನ್ನಪ್ಪನವರ, ಮಂಜುನಾಥ ಹತ್ತಿಯವರ, ಈಶ್ವರಗೌಡ ಪಾಟೀಲ, ಪುಷ್ಪಲತಾ ಡಿ.ಎಲ್​., ಶಿವಾನಂದ ಕೆ., ನಫೀಸಾ, ಹೊಳಲಮ್ಮ, ರೂಪ ಪಾಟೀಲ ಮತ್ತಿತರರಿದ್ದರು.