ನ್ಯೂಸ್

ಜೀತ ಕಾಮಿರ್ಕ ಪದ್ಧತಿ ನಿಷೇಧ ಕುರಿತು ಜಾಗೃತಿ ಮೂಡಿಸಿ; ಡಾ. ನಾಗರಾಜ

ಹಾವೇರಿ: ಜೀತ ಕಾಮಿರ್ಕ ಪದ್ಧತಿ ಒಂದು ಅಪರಾಧವಾಗಿದೆ. ಜೀತ ಕಾಮಿರ್ಕ ಪದ್ಧತಿ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್​. ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜೀತ ಪದ್ಧತಿ (ರದ್ಧತಿ) ನಿರ್ಮೂಲನಾ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೀತಪದ್ಧತಿ ಅನಾದಿಕಾಲದಿಂದ ನಡೆದುಕೊಂಡು ಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಕಾಫಿ ಎಸ್ಟೇಟ್​, ಇಟ್ಟಿಗಿ ಭಟ್ಟಿ, ಕಲ್ಲು ಕ್ವಾರಿಗಳಲ್ಲಿ ಸಹ ಇಂತಹ ಕಾಮಿರ್ಕರನ್ನು ನೋಡಬಹುದಾಗಿತ್ತು. 1976ರಲ್ಲಿ ಜೀತ ಕಾಮಿರ್ಕ ಪದ್ಧತಿ ನಿಷೇಧ ಕಾಯ್ದೆ ಜಾರಿ ಮಾಡಿದ್ದರಿಂದ ಈಗ ಹತೋಟಿಗೆ ಬಂದಿದೆ. ಕಾಮಿರ್ಕರ ವಾಕ್​ ಸ್ವಾತಂರ್ತ್ಯ, ಓಡಾಡುವ ಹಕ್ಕು ಹಾಗೂ ಕನಿಷ್ಠ ವೇತನ ನೀಡದಿರುವುದು ಜೀತ ಪದ್ಧತಿಯಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಬೇರೆ ಬೇರೆ ರಾಜ್ಯಗಳಿಂದ ಕಾಮಿರ್ಕರನ್ನು ಕರೆದುಕೊಂಡು ಬಂದು, ಯಾರಿಗೂ ತಿಳಿಯದಂತೆ ಒಂದು ಕೊಠಡಿಯಲ್ಲಿ ಇರಿಸಿಕೊಂಡು ಕೆಲಸಮಾಡಿಸಿಕೊಳ್ಳುವುದು. ವರ್ಷಾನುಗಂಟಲೆ ಸಂಬಳ ನೀಡದಿರುವುದು ನಡೆಯುತ್ತದೆ. ಹಾಗಾಗಿ ಇಂತಹ ಪ್ರಕರಣಗಳನ್ನು ಗಮನಿಸಬೇಕು. ಅವರನ್ನು ಜೀತದಿಂದ ಮುಕ್ತಗೊಳಿಸಬೇಕು. ಜೀತಪದ್ಧತಿಯಿಂದ ಮುಕ್ತಗೊಳಿಸಿದವರಿಗೆ ಮೊದಲು ಆತ್ಮಸ್ಥೆ$ರ್ಯ ತುಂಬಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಕ್ಕಳಾಗಿದ್ದರೆ ಅವರನ್ನು ಶಾಲೆಗೆ ದಾಖಲಿಸಬೇಕು. ವಯಸ್ಕರರಿದ್ದರೆ ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸಮಾಡಬೇಕು ಎಂದರು.

ಉಪ ವಿಭಾಗಾಧಿಕಾರಿ ಚೆನ್ನಪ್ಪ ಮಾತನಾಡಿ, ಜೀತ ಪದ್ಧತಿ ಸಾಮಾಜಿಕ ಪಿಡುಗಾಗಿದೆ. ಇದು ರಾಜ-ಮಹಾರಾಜರ ಕಾಲದಿಂದ ನಡೆದುಕೊಂಡು ಬಂದಿದೆ. ಜೀತ ಕಾಮಿರ್ಕ ಪದ್ಧತಿ ನಿಷೇಧ ಕಾಯ್ದೆ ಜಾರಿಯಿಂದ ಶೇ.99 ರಷ್ಟು ಜೀತ ಪದ್ಧತಿ ಹತೋಟಿಗೆ ಬಂದಿದೆ. ಅಲ್ಲೊಂದು ಇಲ್ಲೊಂದು ಜೀತ ಪದ್ಧತಿ ಕಾಣಬಹುದಾಗಿದೆ. ಇಂತಹ ಪ್ರಕರಣಗಳನ್ನು ಸಹ ಪತ್ತೆ ಹೆಚ್ಚಿ ಜೀತಪದ್ಧತಿ ಸಂರ್ಪೂಣ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ಮಾಡೋಣ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಜೀತಪದ್ಧತಿ ನಿರ್ಮೂಲನಾ ರಾಜ್ಯ ಉನ್ನತ ಸಮಿತಿ ಸಂಚಾಲಕಿ ಬೃಂದಾ ಅಡಿಗ ಜೀತ ಕಾಮಿರ್ಕ ಪದ್ಧತಿ ನಿಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಜಿಪಂ ಪ್ರಭಾರ ಉಪ ಕಾರ್ಯದಶಿರ್ ಮಿಶೆ, ಡಿವೈಎಸ್ಪಿ ಎಂ.ಎಸ್​. ಪಾಟೀಲ, ತಹಸೀಲ್ದಾರ್​ ಶರಣಮ್ಮ, ಜೀತಪದ್ಧತಿ ನಿರ್ಮೂಲನಾ ಜಿಲ್ಲಾ ಸಂಚಾಲನಾ ಸಮಿತಿ ಸದಸ್ಯರಾದ ಎಸ್​.ಎಚ್​. ಮಜೀದ್​, ಮುತ್ತುರಾಜ ಮಾದರ ಇತರರು ಉಪಸ್ಥಿತರಿದ್ದರು.