ಹಾವೇರಿ: ಇಂಡಿಯನ್ ರೈಲ್ವೆ ೈನಾನ್ಸ್ ಕಾಪೋರ್ರೇಷನ್ನವರು ಯಾವುದೇ ಮಾನದಂಡನೆಗಳನ್ನು ನೋಡದೆ ಜಿಲ್ಲೆಯ ಎಲ್ಲ ಅಂಗವಿಕಲರಿಗೂ ಅವಶ್ಯಕ ಸಾಧನ ಸಲಕರಣೆಗಳನ್ನು ನೀಡುತ್ತಿರುವುದು ತುಂಬಾನೆ ಸಂತೋಷದ ಸಂಗತಿ ಎಂದು ವಿಧಾನಸಭೆ ಉಪಾಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ರಜನಿ ಹಾಲ್ ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಭಾರತ ಸರ್ಕಾರದಿಂದ ಅನುಮೋದಿತಗೊಂಡ ಅಲಿಂಕೋ ಸಂಸ್ಥೆ ಬೆಂಗಳೂರ ಇವರ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಕೂಡ ಅಂಗವಿಕಲರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ ಅದರ ಹೊರತಾಗಿಯು ಇಂದು ಸರ್ಕಾರೇತರ ಸಂಸ್ಥೆಗಳು ವಿಶೇಷಚೇತನರಿಗೆ ಅವಶ್ಯಕ ಪರಿಕರಗಳನ್ನು ಪೂರೈಸಲು ಮುಂದೆ ಬಂದಿವೆ ಇದು ಸಮಾಜದ ಒಳತಿಗೆ ಸಹಕಾರಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ಒಂದು ಉದ್ಯಮ ಬೆಳೆಯಬೇಕಾದರೆ ಅಲ್ಲಿ ಸುಸ್ಥಿರ ಬೆಳವಣಿಗೆ ಹಾಗೂ ಸಾಮಾಜಿಕ ಜವಾಬ್ದಾರಿ ಇರಬೇಕು. ಇವೆರಡು ಆ ಉದ್ಯಮಕ್ಕೆ ಪೂರಕವಾಗಿರುತ್ತದೆ. ಉದ್ಯಮಗಳ ಬೆಳವಣಿಗೆಯಿಂದ ಸಾಮಾಜಿಕ ಹೊಣೆಗಾರಿಕೆ ಹೆಚ್ಚಾಗಿ ಸಮಾಜದಲ್ಲಿ ಸಹಾಯ ಸಹಕಾರಗಳು ನಡೆಯುತ್ತಿವೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದರೆ ಮಾತ್ರ ನಾಡನ್ನು ಸುಲಭವಾಗಿ ಕಟ್ಟಬಹುದು ಎಂದರು.
ತಾಲೂಕಿನ 80 ಅಂಗವಿಕಲರಿಗೆ ವಿವಿಧ ರೀತಿಯ 119 ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ನಗರಸಭೆ ಅಧ್ಯೆ ಶಶಿಕಲಾ ಮಾಳಗಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ, ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಪ್ಪ, ಉಪಾಧ್ಯಕ್ಷ ಮೌನೇಶ ಬಡಿಗೇರ, ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.