ಹಾವೇರಿ: ನಗರದ ಹೊರ ವಲಯದ ಅಜ್ಜಯ್ಯನ ಗುಡಿ ಸಮೀಪದ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದ ಸ್ಥಳದಲ್ಲಿ ಮೇ 7ರಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಮಂಗಳವಾರ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹಾಗೂ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ ವೇದಿಕೆಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಭೋಜರಾಜ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಜಗದೀಶ ಬಸೆಗಣ್ಣಿ, ನಾಗೇಂದ್ರ ಕಡಕೋಳ, ಪ್ರಭು ಹಿಟ್ನಳ್ಳಿ, ನಿರಂಜನ ಹೇರೂರ, ಎಸ್.ಆರ್.ಹೆಗಡೆ, ಡಾ.ಸಂತೋಷ ಆಲದಕಟ್ಟಿ, ರಮೇಶ ಪಾಲನಕರ, ಕಿರಣಕುಮಾರ ಕೋಣನವರ, ಸೋಮಶೇಖರ ತಿಪ್ಪಶೆಟ್ಟಿ, ಸುನೀಲ ರಾಯ್ಕರ, ಚನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ, ಮಂಜುನಾಥ ಬ್ಯಾಹಟ್ಟಿ, ದ್ಯಾಮಣ್ಣ ಕೊಟ್ಟೂರ, ಶಿವಯೋಗಿ ಹುಲಿಕಂತಿಮಠ, ನಂಜುಂಡೇಶ ಕಳ್ಳೇರ, ಚಿಕ್ಕಪ್ಪ ದೊಡ್ಡತಳವಾರ, ನಿಖಿಲ ಡೊಗ್ಗಳ್ಳಿ, ಬಸವರಾಜ ಮಾಸೂರ, ಬವರಾಜ ತುಪ್ಪದ, ಈರಣ್ಣ ಪಟ್ಟಣಶೆಟ್ಟಿ, ವರುಣ ಆನವಟ್ಟಿ, ಗಿರೀಶ ಶೆಟ್ಟರ, ಪ್ರಕಾಶ ಉಜನಿಕೊಪ್ಪ, ವೆಂಕಟೇಶ ದೈವಜ್ಞ, ರಾಜಣ್ಣ ಆನವಟ್ಟಿ, ಇತರರು ಪಾಲ್ಗೊಂಡಿದ್ದರು.