ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ರಣಬೀರ್ ಕಪೂರ್ ಜತೆ ಕಳೆದ ವರ್ಷ ಏಪ್ರಿಲ್ 14 ರಂದು ದಾಂಪತ್ಯ ಜೀವಕ್ಕೆ ಕಾಲಿಟ್ಟರು. ಈ ಜೋಡಿಗೆ ಈಗ ಮುದ್ದಾದ ಹೆಣ್ಣು ಮಗು ಕೂಡಾ ಇದೆ. ಒಂದು ವರ್ಷದ ಬಳಿಕ ಆಲಿಯಾ ಧರಿಸಿರುವ ಮಾಂಗಲ್ಯ ಸರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಲಿಯಾ ಧರಿಸಿದ್ದ ಮಾಂಗಲ್ಯ ಸರವನ್ನು ವಜ್ರದಿಂದ ಮಾಡಲಾಗಿದೆ. ಇನ್ಫಿನಿಟಿ ಚಿಹ್ನೆ ಹೊಂದಿದೆ. ಅದರ ಮಧ್ಯದಲ್ಲಿ ಸಾಲಿಟೇರ್ ಜೋಡಿಸಲಾಗಿದೆ. ಇನ್ಫಿನಿಟಿಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ರಣಬೀರ್ ಕಪೂರ್ ಅವರ ನೆಚ್ಚಿನ ಸಂಖ್ಯೆ. ರಣಬೀರ್ ಕಪೂರ್ ಅವರಿಗೆ 8 ಲಕ್ಕಿ ನಂಬರ್ ಅಂತೆ. ಹೀಗಾಗಿ ಮಾಂಗಲ್ಯ ಸರಕ್ಕೆ ಬಳಸಿಕೊಂಡಿದ್ದಾರೆ ಅಲಿಯಾ ಎನ್ನಲಾಗಿದೆ.
ಮಾಂಗಲ್ಯದ ವಿಶೇಷತೆ?:
ಪಾರ್ಟಿಯೊಂದರಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆಲಿಯಾ ಧರಿಸಿದ್ದ ಮಾಂಗಲ್ಯ ಸರ ಫೋಟೋದಲ್ಲಿ ಕಾಣಿಸಿದ್ದು, ವೈರಲ್ ಆಗಿದೆ. ಆಲಿಯಾ ಮಾಂಗ್ಯದಲ್ಲಿರುವ 8 ರಂತೆ ಕಾಣುವ ಚಿಹ್ನೆಯು ರಣಬೀರ್ ಕಪೂರ್ ಅವರ ಲಕ್ಕಿ ನಂಬರ್ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಆಲಿಯಾ ಭಟ್ ಅವರ ಮಂಗಳಸೂತ್ರದ ಬಗ್ಗೆ ಅಭಿಮಾನಿಗಳು ಈಗ ಮಾತನಾಡುತ್ತಿದ್ದಾರೆ.
ಹಲವು ಪ್ರಾಜೆಕ್ಟ್ಗಳು ಆಲಿಯಾ ಅವರ ಕೈಯಲ್ಲಿ ಇವೆ. ಕೆಲವೇ ತಿಂಗಳ ಹಿಂದೆ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದರು. ಆ ಮಗುವಿಗೆ ರಹಾ ಎಂದು ಹೆಸರು ಇಡಲಾಗಿದೆ.