ನ್ಯೂಸ್

ವಿಂಡೋಸ್ 10 ಮತ್ತು 11ರಲ್ಲಿ ಪಾಸ್​ವರ್ಡ್​ ಮರೆತು ಹೋಗಿದ್ದೀರಾ? ಇಲ್ಲಿದೆ ಪರಿಹಾರ!

ಬೆಂಗಳೂರು: ಇತ್ತೀಚೆಗೆ ಮೈಕ್ರೋಸಾಫ್ಟ್​​ನಿಂದ ಬಂದ ವಿಂಡೋಸ್ 10 ಮತ್ತು 11ರಲ್ಲಿ ಹೊಸ ಸೆಕ್ಯೂರಿಟಿ ಅಪ್ಡೇಟ್ಸ್​​ಗಳನ್ನು ಹೊಂದಿದೆ. ಉದಾಹರಣೆಗೆ ವಿಂಡೋಸ್ 10ರಲ್ಲಿ ಅಪ್ಲಿಕೇಶನ್​ ಮತ್ತು ಫೈಲ್​ಗಳನ್ನು ಓಪನ್ ಮಾಡಲು ಹೊಸ ಮಾರ್ಗವನ್ನು ಹೊಂದಿದೆ. ಬಹಳಷ್ಟು ಬಳಕೆದಾರರು ಆಪರೇಟಿಂಗ್ ಸಿಸ್ಟಮ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಪಾಸ್​ವರ್ಡ್​​ಗಳನ್ನು ಕಳೆದುಕೊಂಡಿದ್ದಾರೆ.

ವಿಂಡೋಸ್ 10 ಮತ್ತು 11ರಲ್ಲಿ ಮರೆತುಹೋದ ಪಾಸ್​ವರ್ಡ್​ ಅನ್ನು ಮರು ಪಡೆಯಲು ಮೈಕ್ರೋಸಾಫ್ಟ್ ಹಲವಾರು ಆಯ್ಕಗಳನ್ನು ಸೇರಿಸಿದೆ. ಯುಎಸ್​ಬಿ (USB) ಕೀ ಮುಖಾಂತರ ಪಾಸ್​ವರ್ಡ್​ ಅನ್ನು ಮರುಹೊಂದಿಸಬಹುದು. ವಿಂಡೋಸ್ 10ರಲ್ಲಿ ಆನ್-ಸ್ಕ್ರೀನ್ ಆಯ್ಕೆ ಅಥವಾ Windows.comನಿಂದ ಮೈಕ್ರೋಸಾಫ್ಟ್ ಆಯ್ಕೆಯನ್ನು ಡೌನ್​​ಲೋಡ್ ಮಾಡಬಹುದು. ವಿಂಡೋಸ್ 7ರಲ್ಲಿ ಈ ಆಯ್ಕೆ ಪಡೆಯಲು ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮಾಡಬೇಕು.

ಈ ಆಯ್ಕೆಯನ್ನು ಸಕ್ರಿಯಗೊಳಿಸಿದ ನಂತರ ನಿಮ್ಮ ಖಾತೆಯನ್ನು ಪ್ರವೇಶಿಸಲು ಮತ್ತು ಪಾಸ್​ವರ್ಡ್​ ರೀಸೆಟ್ ಮಾಡಲು ಯುಎಸ್​​ಬಿ ಕೀಯನ್ನು ಬಳಸಬಹುದು. ಯುಎಸ್​​ಬಿ ಕೀಯನ್ನು ಪಿಸಿ ಅಥವಾ ಸ್ಥಿರ ಇಂಟರ್​​ನೆಟ್ ಸಂಪರ್ಕ್ ಇದ್ದಾಗ ಪ್ಲಗ್ ಮಾಡಬೇಕು.

ನೀವು ತಡವಾಗಿದ್ದರೆ ಅಥವಾ ಸಿಸ್ಟಮ್ ತೆರೆದಿಲ್ಲದಿದ್ದರೆ ಯೋಚನೆ ಮಾಡುವ ಅಗತ್ಯವಿಲ್ಲ. ಪಾಸ್​ವರ್ಡ್​ ರೀಸೆಟ್ ಮಾಡಿ ಕಂಪ್ಯೂಟರ್ ಅನ್ನು ಓಪನ್ ಮಾಡಬಹುದು. ಪಾಸ್​ವರ್ಡ್​ ರೀಸೆಟ್ ಮಾಡಲು ಕೆಳಗೆ ಹೇಳಿರುವಂತೆ ಮಾಡಿ.

ವಿಂಡೋಸ್​ 11ರ ಲೋಕಲ್ ಅಕೌಂಟ್ ಪಾಸ್​ವರ್ಡ್​ ರೀಸೆಟ್​:

1. ಸೈನ್-ಇನ್ ಸ್ಕ್ರೀನಲ್ಲಿ, ಪಾಸ್‌ವರ್ಡ್ ಮರುಹೊಂದಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಪಿನ್ ಬಳಸಲು ಬಯಸಿದರೆ, ಪಿನ್ ಸೈನ್-ಇನ್ ಸಮಸ್ಯೆಗಳನ್ನು ನೋಡಿ. ನೀವು ನೆಟ್‌ವರ್ಕ್ ಮಾಡಲಾದ ಕೆಲಸದ ಸಾಧನವನ್ನು ಬಳಸುತ್ತಿದ್ದರೆ, ನಿಮ್ಮ ಪಾಸ್‌ವರ್ಡ್ ಅಥವಾ ಪಿನ್ ಅನ್ನು ಮರುಹೊಂದಿಸುವ ಆಯ್ಕೆಯನ್ನು ನೀವು ನೋಡದೇ ಇರಬಹುದು. ಆ ಸಂದರ್ಭದಲ್ಲಿ ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.

2. ಸೆಕ್ಯೂರಿಟಿ ಪ್ರಶ್ನೆಗಳನ್ನು ಉತ್ತರಿಸಿ.

3. ಹೊಸ ಪಾಸ್​ವರ್ಡ್​ ಸೆಟ್ ಮಾಡಿ.

4. ಹೊಸ ಪಾಸ್​ವರ್ಡ್​ ಮೂಲಕ ಸೈನ್ ಇನ್ ಆಗಿ.

ವಿಂಡೋಸ್​ 10ರ ಲೋಕಲ್ ಅಕೌಂಟ್ ಪಾಸ್ವರ್ಡ್​ ರೀಸೆಟ್​:

1. ಸೈನ್-ಇನ್ ಸ್ಕ್ರೀನಲ್ಲಿ, ಪಾಸ್‌ವರ್ಡ್ ಮರುಹೊಂದಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಬದಲಿಗೆ ನೀವು ಒಂದನ್ನು ಬಳಸಿದರೆ ಪಿನ್ ಸೈನ್-ಇನ್ ಸಮಸ್ಯೆಗಳನ್ನು ನೋಡಿ. ನೆಟ್‌ವರ್ಕ್‌ಗೆ ಸಂಪರ್ಕಹೊಂದಿರುವ ಸಾಧನವನ್ನು ನೀವು ಬಳಸುತ್ತಿದ್ದರೆ ನಿಮ್ಮ ಪಾಸ್‌ವರ್ಡ್ ಅಥವಾ ಪಿನ್ ಅನ್ನು ಮರುಹೊಂದಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ. ಏಜೆನ್ಸೀಸ್