ನ್ಯೂಸ್

ಬೆಂ-ಮೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಸ್ಪೀಡ್ ಕಂಟ್ರೋಲ್ ಇರಲಿ; ಇಲ್ಲಂದರೆ ಎಫ್ ಐಆರ್

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಅತೀ ವೇಗದ ಚಾಲನೆಗೆ ಆಗಸ್ಟ್ 1 ರಿಂದ ಎಫ್ ಐಆರ್ ದಾಖಲಿಸುವುದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸರಕ್ಷತ) ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಅತಿ ವೇಗದ ಚಾಲನೆಯಿಂದ ಶೇ. 90 ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅತೀ ವೇಗದ ಚಾಲನೆ ದಿನೇ ದಿನೆ ಹೆಚ್ಚಾಗುತ್ತಿದೆ. 130 ಕಿ.ಮೀ. ಗೂ ಅಧಿಕ ಸ್ಪೀಡ್‌ನಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ಈಗಾಗಲೇ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಳವಡಿಸಿರವು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಯಾಮರಾಗಳಲ್ಲಿ 1 ದಿನಕ್ಕೆ 155ಕ್ಕೂ ಅಧಿಕ ಕೇಸ್ ದಾಖಲಾಗುತ್ತಿವೆ.

ವೇಗ ಮಿತಿ ಮೀರಿದ ಪರಿಣಾಮ ಅಪಘಾತಕ್ಕೂ ಆಹ್ವಾನ ನೀಡಿದಂತೆ ಆಗುತ್ತಿದೆ. ಆದರಿಂದ ಆಗಸ್ಟ್ 1 ರಿಂದ ಅತಿ ವೇಗವಾಗಿ ವಾಹನ ಚಾಲನೆ ಮಾಡುವವರ ವಿರುದ್ದ ಎಫ್‌ಐಆರ್ ದಾಖಲಿಸಿ ಕೋರ್ಟ್‌ಗೆ ಸಲ್ಲಿಸಲು ಪೊಲೀಸರಿಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

2023ರ ಜನವರಿ 23ರಿಂದ ಮೇ 23ರ ನಡುವೆ 288 ಅಪಘಾತ ಸಂಭವಿಸಿ 100 ಮಂದಿ ಸಾವನ್ನಪ್ಪಿದ್ದು, 301 ಮಂದಿ ಗಾಯಗೊಂಡಿದ್ದರು.

ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಎಕ್ಸ್‌ಪ್ರೆಸ್ ಹೈವೇಯಲ್ಲಿ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು. ಪರಿಣಾಮ 2024ರ ಜನವರಿ 24 ರಿಂದ ಮೇ 24ರ ನಡುವೆ 125 ಅಪಘಾತ ಸಂಭವಿಸಿ 31 ಮೃತಪಟ್ಟಿದ್ದರು. ಅಲ್ಲದೆ, 167 ಮಂದಿ ಗಾಯಗೊಂಡಿದ್ದರು. ಆದರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಹಂತ ಹಂತವಾಗಿ ಸಂಚಾರ ನಿಯಮಗಳನ್ನು ಒಂದೊಂದಾಗಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಇತ್ತೀಚೆಗೆ ವಾಹನಗಳಿಗೆ ಅಳವಡಿಸಿದ್ದ ಕಣ್ಣು ಕುಕ್ಕುವ ಎಸ್‌ಇಡಿ ಬಲ್ಪ್ ವಿರುದ್ಧ ರಾಜ್ಯ ವ್ಯಾಪಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ.

ಅಲ್ಲದೆ, ವಿರುದ್ಧ ದಿಕ್ಕು, ುಟ್‌ಪಾತ್ ಮೇಲೆ ವಾಹನ ಚಾಲನೆ ವಿರುದ್ಧ ಆಗಸ್ಟ್ 1 ರಿಂದ ವಿಶೇಷ ಕಾರ್ಯಾಚರಣೆ ನಡೆಸಲು ಸಹ ಸೂಚನೆ ನೀಡಲಾಗಿದೆ. ಜೊತೆಗೆ ದೋಷಪೂರಿತ ನಂಬರ್ ಪ್ಲೇಟ್‌ಗಳ ವಿರುದ್ಧ ಆಗಸ್ಟ್ 1 ರಿಂದ ರಾಜ್ಯ ವ್ಯಾಪಿ ವಿಶೇಷ ಕಾರ್ಯಾಚರಣೆ ನಡೆಸಬೇಕು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಜೀವಕ್ಕೆ ಅಪಾಯವಾಗಿದೆ. ಆದರಿಂದ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವ ವಾಹನ ಚಾಲಕ/ಸವಾರರ ವಿರುದ್ಧ ಬಿಎನ್‌ಎಸ್ 281 ರ ಅನ್ವಯ ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆ 184 ಅನ್ವಯ ಎ್ಐಆರ್ ದಾಖಲಿಸು ಕ್ರಮ ಕೈಗೊಳ್ಳಲು ಅಲೋಕ್ ಕುಮಾರ್ ಪೊಲೀಸರಿಗೆ ಸೂಚಿಸಿದ್ದಾರೆ.