ನ್ಯೂಸ್

ಅತಿದೊಡ್ಡ ರಾಮ ರಂಗೋಲಿ: ಇಲ್ಲಿದೆ ನೋಡಿ ವಿಡಿಯೋ

ಮೋಹನ್​ ಶೆಟ್ಟಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಲಲ್ಲಾ 'ಪ್ರಾಣ ಪ್ರತಿಷ್ಠಾ' ಸಮಾರಂಭವು ಮಧ್ಯಾಹ್ನ 12:20ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಐತಿಹಾಸಿಕ ಆಚರಣೆಗಳಿಗೆ ಅಂತಿಮ ಕ್ಷಣಗಣನೆ ಶುರುವಾಗಿದ್ದು, ಉತ್ತರಪ್ರದೇಶದ ದೇವಾಲಯ ಪಟ್ಟಣದ ಧಾರ್ಮಿಕ ಸ್ಥಳದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಇದರ ನಡುವೆ ಶ್ರೀರಾಮನ ಅತಿದೊಡ್ಡ ರಂಗೋಲಿ ದೇಶದ ಜನರ ಗಮನ ಸೆಳೆದಿದೆ.

ಶ್ರೀಮತಿ ದರ್ಶನಾಬೆನ್ ಜರ್ದೋಶ್ ಅವರ ಮಾರ್ಗದರ್ಶನದಲ್ಲಿ ಗುಜರಾತಿನ ಸೂರತ್‌ನಲ್ಲಿ, ಅಯೋಧ್ಯೆಯ ರಾಮಮಂದಿರಕ್ಕೆ ಸಮರ್ಪಿತವಾದ 11,111 ಚದರ ಅಡಿಯ ಬೃಹತ್ ರಂಗೋಲಿಯನ್ನು ರಚಿಸಲಾಗಿದೆ. ಮೋಟಾ ಮಂದಿರ್ ಯುವಕ ಮಂಡಲ್ ಮತ್ತು ಅಮಿ ಚಾರಿಟೇಬಲ್ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ನೈಜ ಶ್ರೀರಾಮ ರಂಗೋಲಿಯನ್ನು ಒಳಗೊಂಡಿದ. 1400 ಕೆಜಿ ಬಣ್ಣವನ್ನು ಬಳಸಲಾಗಿದ್ದು, ಮೆಹಂದಿ ಕಲಾವಿದೆ ನಿಮಿಷಾಬೆನ್ ಪರೇಖ್ ವಿನ್ಯಾಸಗೊಳಿಸಿದ್ದಾರೆ.

ಇದಿಷ್ಟೇ ಅಲ್ಲದೆ ಸುಮಾರು 1,000 ವಿಐಪಿಗಳಿಗೆ ಪ್ರಸಾದವನ್ನು ಸಿದ್ಧಪಡಿಸುವ ಅಡುಗೆಮನೆಯಲ್ಲಿ ಭಾರಿ ಸಡಗರ ತುಂಬಿದೆ. ಅಯೋಧ್ಯೆ ಪ್ರವೇಶಿಸುತ್ತಿದ್ದಂತೆ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ಮಿರ ಮಿರ ಮಿಂಚುವಂತೆ ಅಲಂಕರಿಸಿರುವ ಆಡಳಿತ ಮಂಡಳಿ, ಭಕ್ತಾಧಿಗಳ ಕಣ್ಮನ ಸೆಳೆಯಲು ಹಲವು ವಿಶೇಷತೆಗಳನ್ನು ಸಿದ್ಧಪಡಿಸಿದೆ.

ನಾಳೆ ನಡೆಯಲಿರುವ ವಿಜೃಂಭಣೆಯ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆ ಮತ್ತು ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಯೋಧ್ಯೆಗೆ ತೆರಳಿ ಸಂಪೂರ್ಣ ಕಾರ್ಯಕ್ರವನ್ನು ವೀಕ್ಷಿಸಲು ಆಗಲಿಲ್ಲ ಎಂದು ಜನರು ಬೇಸರಗೊಳ್ಳುವ ಅವಶ್ಯಕತೆಯಿಲ್ಲ. ಭಕ್ತರು ತಮ್ಮ ಮನೆಯಲ್ಲೇ ದೂರದರ್ಶನ ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಕಾರ್ಯಕ್ರವನ್ನು ವೀಕ್ಷಿಸಬಹುದಾಗಿದೆ,(ಏಜೆನ್ಸೀಸ್).