ನ್ಯೂಸ್

ಹಟ್ಟಿ ಸುತ್ತಮುತ್ತ ಜಿಟಿಜಿಟಿ ವರ್ಷಧಾರೆ

ಅಶೋಕ್ ಕುಮಾರ್ ಎನ್

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ, ಹಟ್ಟಿ ಕ್ಯಾಂಪಿನ ಅಧಿಸೂಚಿತ ಪ್ರದೇಶ ಸಮಿತಿ ಹಾಗೂ ಆನ್ವರಿ, ಪೈದೊಡ್ಡಿ, ಗೆಜ್ಜಲಗಟ್ಟಾ, ರೋಡಲಬಂಡಾ(ತವಗ), ಕೋಠಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವಸ್ತವಾಗಿದೆ.

ಜಿಟಿಜಿಟಿ ಮಳೆಯಾಗುತ್ತಿದ್ದರೂ ಕೃಷಿಗೆ ಪೂರಕ ವಾತಾವರಣ ನಿರ್ಮಾಣವಾಗಿಲ್ಲ. ಕೃಷಿ ಭೂಮಿ ಹಸಿಯಾಗಿಲ್ಲ. ಹಳ್ಳ-ಕೊಳ್ಳಗಳು ತುಂಬುತ್ತಿಲ್ಲ. ಹಟ್ಟಿ-ರಾಯಚೂರು ರಸ್ತೆಯಲ್ಲಿ ಹಟ್ಟಿ ಪಟ್ಟಣ ಹಾಗೂ ಹಟ್ಟಿ ಕ್ಯಾಂಪ್ ಸಂಪರ್ಕಿಸುವ ಸೇತುವೆ ನಿರ್ಮಾಣ ಪ್ರಗತಿ ಹಂತದಲ್ಲಿದೆ. ಸೇತುವೆ ಪಕ್ಕದ ಹಳ್ಳದಲ್ಲಿ ಕಪ್ಪು ಮಣ್ಣು ಹಾಕಿ ನಿರ್ಮಿಸಿರುವ ತಾತ್ಕಾಲಿಕ ಮಾರ್ಗ ಮಳೆ ನೀರು ಹಾಗೂ ಹಳ್ಳದ ತೇವಾಂಶಕ್ಕೆ ಕುಸಿಯುತ್ತಿದೆ. ಪೊಲೀಸ್ ಬ್ಯಾರಿಕೇಡ್ ಅಳವಡಿಸಿದ್ದರೂ ಭಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದಾಗಿ ಪಾದಚಾರಿಗಳು ಹಾಗೂ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ತಿರುಗಾಡುವಂತಾಗಿದೆ. ಹಟ್ಟಿ ಕ್ಯಾಂಪ್ ಜತ್ತಿ ಕಾಲನಿಯಿಂದ ಕೋಠಾ ಕ್ರಾಸ್ ಸಂಪರ್ಕಿಸುವ ರಸ್ತೆ ಕೆಸರು ಗದ್ದೆಯಂತಾಗಿದೆ.