ಹಾಥರಸ್: ದೇಶದ ಗಮನಸೆಳೆದಿರುವ ಹಾಥರಸ್ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಮೃತಪಟ್ಟ 19 ವರ್ಷದ ದಲಿತ ಯುವತಿಯ ಕುಟುಂಬದ ಸದಸ್ಯರು ಬಿಗಿಬಂದೋಬಸ್ತ್ನೊಂದಿಗೆ ಸೋಮವಾರ ಅಲಹಾಬಾದ್ ಹೈಕೋರ್ಟ್ನ ಲಖನೌ ನ್ಯಾಯಪೀಠದ ವಿಚಾರಣೆಗೆ ಹಾಜರಾಗಬೇಕಾಗಿದೆ.
ಅವರನ್ನು ಹೈಕೋರ್ಟ್ಗೆ ಕರೆತರುವುದಕ್ಕೆ ಜಿಲ್ಲಾ ನ್ಯಾಯಾಧೀಶರನ್ನು ನೋಡೆಲ್ ಅಧಿಕಾರಿಯಾಗಿ ಹೈಕೋರ್ಟ್ ನೇಮಕ ಮಾಡಿದೆ. ಅವರನ್ನು ಕೋರ್ಟ್ಗೆ ಕರೆದೊಯ್ಯುವ ಮತ್ತು ಅವರ ಸಂಪೂರ್ಣ ಸುರಕ್ಷೆಯ ಹೊಣೆಗಾರಿಕೆ ಪೊಲೀಸರದ್ದು. ಆದರೆ, ಎಲ್ಲ ವಿವರವನ್ನೂ ಬಹಿರಂಗಗೊಳಿಸುವುದು ಸಾಧ್ಯವಿಲ್ಲ ಎಂದು ಹಾಥರಸ್ ಎಸ್ಪಿ ವಿನೀತ್ ಜೈಸ್ವಾಲ್ ಶನಿವಾರ ತಿಳಿಸಿದ್ದಾರೆ.
ಸಂತ್ರಸ್ತೆಯ ಮನೆ ಇರುವ ಬುಲ್ಗಢಿಪ್ರದೇಶದಲ್ಲಿ 8 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಭದ್ರತೆಗಾಗಿ 60 ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಸಂತ್ರಸ್ತೆಯ ಕುಟುಂಬದ ಸದಸ್ಯರ ರಕ್ಷಣೆಯ ಹೊಣೆಗಾರಿಕೆ ಪೊಲೀಸ್ ಇಲಾಖೆಯದ್ದಾದ ಕಾರಣ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದಿನದ 24 ಗಂಟೆಯೂ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)