ನ್ಯೂಸ್

ಹಾಸನ ಕಾಂಗ್ರೆಸ್ ಸಮವೇಶ ಸಿಎಂ ಬೀಳ್ಕೊಡುಗೆಯೆ? ಜೆಡಿಎಸ್ ಪ್ರಶ್ನೆ|Congress convention bid farewell to CM?

ಬೆಂಗಳೂರು: ಹಾಸನದಲ್ಲಿ ಡಿಸೆಂಬರ್ 5ರಂದು ನಡೆಯುವ ಕಾಂಗ್ರೆಸ್ ಸಮಾವೇಶ ಸಿದ್ದರಾಮಯ್ಯ ಬೀಳ್ಕೊಡುಗೆ ಸಮಾರಂಭವಾ?(Hasan's Congress convention bid farewell to CM?) ಎಂದು ಜೆಡಿಎಸ್(JDS) ಕೆಣಕಿದೆ.

ಸಿಎಂಗೆ ಸ್ವಯಂ ನಿವೃತ್ತಿ ಕೊಡಿಸಲು ಕೈ ಹೈಕಮಾಂಡ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಸೂಚನೆಯೇ ಇದು? ಅಡ್ರೆಸ್ಸೆ ಇಲ್ಲದ ಅಹಿಂದ ಸಮಾವೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಸ ಗಂಜಿ ಕೇಂದ್ರದತ್ತ ಪಯಣದ ಸಂಕೇತವೆ? ಅಥವಾ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರೇ ಪ್ಲ್ಯಾನ್ ಮಾಡಿರುವ ಬೀಳ್ಕೊಡುಗೆ ಸಮಾರಂಭವೆ ಎಂದು ಲೇವಡಿ ಮಾಡಿದೆ.

ಮನೆಯೊಂದು ಮೂವತ್ತೊಂದು ಬಾಗಿಲು ಎನ್ನುವಂತೆ ಆಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ(congress government)ದಲ್ಲಿ ಸಿಎಂ ಸಾಹೇಬರಿಗೆ ಸ್ವಯಂ ನಿವೃತ್ತಿ ಕೊಡಿಸಲು ಕೈ ಹೈಕಮಾಂಡ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಸೂಚನೆಯೇ ಇದು? ಎಂದು ಪ್ರಶ್ನಿಸಿದೆ.

ಜೆಡಿಎಸ್ ಬಿಡುವಾಗ ಆಡಿದ್ದ ಸದಾರಮೆ ಆಟವನ್ನೇ ಕಾಂಗ್ರೆಸ್ ಬಿಡುವ ಮುನ್ನ ಸಿದ್ದರಾಮಯ್ಯ ಶುರು ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅನೇಕ ಹಗರಣಗಳಿಂದ ದೇಶವ್ಯಾಪಿ ಕಾಂಗ್ರೆಸ್ ಮುಜುಗರಕ್ಕಿಡಾಗುತ್ತಲೇ ಇದೆ. ಆ ಮುಜುಗರದಲ್ಲಿ ಸಿದ್ದು ಸರ್ಕಾರದ್ದು ಸಿಂಹಪಾಲು ಎಂದು ಟೀಕಿಸಿದೆ.

ವಾಲ್ಮೀಕಿ ನಿಗಮ, ಮುಡಾ, ಪರಿಶಿಷ್ಟರ ಮೀಸಲು ಹಣ ಲೂಟಿ, ಅಬಕಾರಿ ಹಗರಣ ಸೇರಿ ಲಂಚಾವತಾರದಲ್ಲಿ ದಾಖಲೆ ಬರೆದಿರುವ ಸರ್ಕಾರದಲ್ಲಿ, ದಿನಕ್ಕೊಂದರ ಲೆಕ್ಕದಲ್ಲಿ ಹೊರ ಬರುತ್ತಿರುವ ಹಗರಣಗಳು ಹೈಕಮಾಂಡ್ ನಾಯಕರನ್ನೂ ಹೈರಾಣ ಮಾಡಿವೆ. ಹಸ್ತಿನಾವತಿಯಲ್ಲೂ ಇವರ ಮಾನ ಹಾದಿ ಬೀದಿಯಲ್ಲಿ ಹರಾಜಾಗುತ್ತಿದೆ ಎಂದು ಲೇವಡಿ ಮಾಡಿದೆ.

50:50 ಅನುಪಾತದ ಲೆಕ್ಕದಲ್ಲಿ ನಡೆದ ಅಧಿಕಾರ ಸೂತ್ರ ಬಿಗಡಾಯಿಸಿದ್ದು, ಕುರ್ಚಿ ಆಕಾಂಕ್ಷಿಗಳು ದೆಹಲಿಯಾತ್ರೆ ಜೊತೆಗೆ ಗುಪ್ತ್ ಗುಪ್ತ್ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.