ಅರಕಲಗೂಡು ಕೋಟೆ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ವೈಕುಂಠದ್ವಾರ. 
ನ್ಯೂಸ್

ಲಕ್ಷ್ಮೀ ನರಸಿಂಹಸ್ವಾಮಿ ದೇಗುಲದಲ್ಲಿ ವೈಕುಂಠದ್ವಾರ ನಿರ್ಮಾಣ

ಲೋಕೇಶ್ ಮನು. ಡಿ
ಅರಕಲಗೂಡು: ಪಟ್ಟಣದ ಕೋಟೆ ಐತಿಹಾಸಿಕ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ವೈಕುಂಠದ್ವಾರದ ಸಂಪ್ರೋಕ್ಷಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ದೇವಾಲಯದಲ್ಲಿ ಮೂಲವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಿ, ದೇವತಾ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪುಣ್ಯಾಹ, ಅಗ್ನಿ ಪ್ರತಿಷ್ಠಾಪನೆ ನಡೆಸಿ ನೂತನ ದ್ವಾರಕ್ಕೆವಾಸ್ತು ಹೋಮ, ಪಂಚಸೂಕ್ತ ಹೋಮ ನಡೆಸಿ ಪೂರ್ಣಾಹುತಿ ಸಲ್ಲಿಸಲಾಯಿತು.
ಕದಳಿ ಛೇಧನ, ಗೋಪೂಜೆ ನಡೆಸಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು. ಪುರೋಹತರಾದ ಶ್ರೀವತ್ಸ, ಎ.ಆರ್.ರವೀಶ್ ಪೂಜಾ ಕಾರ್ಯ ನೆರವೇರಿಸಿದರು. ವೈಕುಂಠ ದ್ವಾರ ನಿರ್ಮಾಣದ ದಾನಿಗಳಾದ ಎ.ಎಸ್.ರವಿ, ಎಚ್.ಕೆ. ಸಾವಿತ್ರಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಜಿ.ರಮೇಶ್, ಕೃಷ್ಣಮೂರ್ತಿ ಭಾಗವಹಿಸಿದ್ದರು.