ನ್ಯೂಸ್

VIDEO: ಸೀರೆ ಉಟ್ಟು ಜಿಮ್ನಾಸ್ಟಿಕ್​ ಮಾಡಿದ ಯುವತಿ..ಎಂಥಾ ಪರ್ಫೆಕ್ಟ್​ ಸ್ಟಂಟ್​​ ಇದು..!

ಯೋಗಾಭ್ಯಾಸ, ಸ್ಟಂಟ್​, ಜಿಮ್ನಾಸ್ಟಿಕ್​​...ವಿಡಿಯೋಗಳು ಇಂಟರ್​​ನೆಟ್​​ನಲ್ಲಿ ವೈರಲ್​ ಆಗುವುದು ಹೊಸದಲ್ಲ. ಆದರೆ ಈ ಮಹಿಳೆ ಮಾಡಿದ ಸ್ಟಂಟ್​ ನಿಜಕ್ಕೂ ನಿಮಗೆ ಅಪರೂಪ ಅನ್ನಿಸದೆ ಇರದು. ಹಾಗಂತ ಇವರೇನೂ ಅತಿದೊಡ್ಡ, ಕ್ಲಿಷ್ಟಕರ ಸಾಹಸ ಮಾಡಿಲ್ಲ.

ಹರಿಯಾಣದ ಮಹಿಳೆ ಒಂದು ಆಕ್ರೋಬ್ಯಾಟಿಕ್​ ಜಿಮ್ನಾಸ್ಟಿಕ್​​ನ ಒಂದು ಸ್ಟಂಟ್​​ನ್ನು ಸೀರೆ ಉಟ್ಟುಕೊಂಡೇ ಮಾಡಿದ್ದಾರೆ. ಅದೆಷ್ಟು ಪರ್ಫೆಕ್ಟ್​ ಆಗಿ ಮಾಡಿದ್ದಾರೆಂದರೆ..ವಿಡಿಯೋ ನೋಡಿದರೆ ನಿಮಗೂ ಅಚ್ಚರಿ, ಖುಷಿ ಆಗದೆ ಇರದು.

ಇವರು ಹರಿಯಾಣದ ಪಾರುಲ್​ ಅರೋರಾ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಪಾರುಲ್​ ಅರೋರಾ ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತ ಜಿಮ್ನಾಸ್ಟ್​.

ಆಗಸ್ಟ್​ 30ರಂದು ವಿಡಿಯೋ ಪೋಸ್ಟ್​ ಆಗಿದೆ. ನೆಟ್ಟಿಗರಂತೂ ಸಿಕ್ಕಾಪಟೆ ಹೊಗಳುತ್ತಿದ್ದಾರೆ. ಪಾರುಲ್​ ನೀಲಿ ಸೀರೆಯುಟ್ಟಿದ್ದರೆ, ಅವರೊಂದಿಗೆ ಇರುವ ಯುವಕ ಸೂಟ್​ ಧರಿಸಿದ್ದಾರೆ. ಇವರಿಬ್ಬರೂ ಮನೆಯ ಟೆರೇಸ್​ ಮೇಲೆ ಮ್ಯಾಟ್​ ಹಾಕಿ, ಅಲ್ಲಿಯೇ ಇವರಿಬ್ಬರೂ ಬ್ಯಾಕ್​ ಲಿಫ್ಟ್​ ಮಾಡಿದ್ದಾರೆ.

ಮೊದಲು ಇಬ್ಬರು ನಡೆದುಕೊಂಡು ಬರುತ್ತಾರೆ. ಒಮ್ಮೆಲೇ ಮ್ಯಾಟ್​​ನ ಮೇಲೆ ಜಿಮ್ನಾಸ್ಟಿಕ್​ ಮಾಡಿದ್ದಾರೆ. ಪಾರೂಲ್​ ಸೀರೆ ಉಟ್ಟಿದ್ದರೂ, ಬ್ಯಾಕ್​ ಲಿಫ್ಟ್​ ಮಾಡಿದ ಸರಿಯಾಗಿ ಅವರ ಕಾಲ ಮೇಲೆ ನಿಲ್ಲುತ್ತಾರೆ. ಹಾಗೇ ಮತ್ತೆ ತಮ್ಮ ಪಾರ್ಟನರ್​ ಜತೆ ಕ್ಯಾಟ್​ ವಾಕ್​ ಮಾಡಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋಕ್ಕೆ ಒಂದು ಕೋಟಿಗೂ ಅಧಿಕ ವೀವ್ಸ್ ಬಂದಿದೆ.

ಒಮ್ಮೆ ಈ ವಿಡಿಯೋವನ್ನು ನೀವೂ ನೋಡಿಕೊಂಡು ಬನ್ನಿ...