ನ್ಯೂಸ್

ಅವಿವಾಹಿತರಿಗೆ ಶೀಘ್ರವೇ ಪಿಂಚಣಿ ವ್ಯವಸ್ಥೆ: ಹರಿಯಾಣ ಸಿಎಂ

ಹರಿಯಾಣ: ಅವಿವಾಹಿತರಿಗೆ ಶೀಘ್ರವೇ ಪಿಂಚಣಿ ಜಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಕರ್ನಾಲ್‌ನ ಕಲಂಪುರ ಗ್ರಾಮದಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಕಾಸರಗೋಡಿನಲ್ಲಿ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕಿ ನೇಮಕ! ಕನ್ನಡ ಶಿಕ್ಷಕರ ಎತ್ತಂಗಡಿ…

ಜನ ಸಂವಾದ ಸಂದರ್ಭದಲ್ಲಿ 60 ವರ್ಷದ ಅವಿವಾಹಿತ ವ್ಯಕ್ತಿಯ ಪಿಂಚಣಿ ಸಂಬಂಧಿತ ದೂರಿಗೆ ಪ್ರತಿಕ್ರಿಯಿಸಿದ ಖಟ್ಟರ್. ಸರ್ಕಾರವು 45 ರಿಂದ 60 ವಯೋಮಾನದ ಅವಿವಾಹಿತರಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಚಿಂತಿಸುತ್ತಿದೆ. ಈ ಯೋಜನೆಯ ಕುರಿತು ಒಂದು ತಿಂಗಳೊಳಗೆ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಇಂದಿನ ದಿನಗಳಲ್ಲಿ ಶೇ.70ರಿಂದ 80ರಷ್ಟು ಕೆಲಸಗಳು ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಅದಕ್ಕಾಗಿಯೇ ಹಳ್ಳಿಗಳಲ್ಲಿ ಇಂಟರ್‌ನೆಟ್ ಸೇವೆ ಅಗತ್ಯವಾಗಿದ್ದು, ಬಿಎಸ್‌ಎನ್‌ಎಲ್‌ನೊಂದಿಗೆ ಮಾತುಕತೆ ನಡೆಸಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಇಂಟರ್‌ನೆಟ್ ಸೇವೆ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಸೂಚಿಸಿದ್ದಾರೆ.(ಏಜೆನ್ಸೀಸ್​)