ಯಡೇಹಳ್ಳಿಯ ಮಾಸ್ತಿಗುಡಿ ಯುವಕ ಸಂಘದ ಗಣೇಶ ಮೂರ್ತಿಗೆ ಮುಸ್ಲಿಂ ಸಮಾಜದ ಯುವಕ ರೆಹಮಾನ್ ಪೂಜೆ ಸಲ್ಲಿಸಿದರು. ಎಸ್.ರವಿಕುಮಾರ್, ಗಣಪತಿ, ರಾಜು ಇದ್ದರು.  
ನ್ಯೂಸ್

ಸಾಮರಸ್ಯ ಸಾರಿದ ಮುಸ್ಲಿಂ ಯುವಕ

ಶಿವಕುಮಾರ ಎಸ್.ಪಿ.

ಆನಂದಪುರ: ಸಮೀಪದ ಯಡೇಹಳ್ಳಿಯಲ್ಲಿ ಮುಸ್ಲಿಂ ಸಮಾಜದ ಯುವಕ ಅಬ್ದುಲ್ ರೆಹಮಾನ್ ಸೋಮವಾರ ಸಾರ್ವಜನಿಕ ಗಣಪತಿ ಮೂರ್ತಿಗೆ ಹೂವಿನ ಹಾರ ಸಮರ್ಪಿಸಿ ಸಾಮರಸ್ಯ ಸಂದೇಶ ನೀಡಿದ್ದಾರೆ. ಯಡೇಹಳ್ಳಿಯ ಮಾಸ್ತಿಗುಡಿ ಯುವಕ ಸಂಘದ ಗಣೇಶ ಮೂರ್ತಿಗೆ ಹಾರ ಹಾಕಿ ಪೂಜೆ ಸಲ್ಲಿಸಿದರು. ಗಣೇಶ ಚತುರ್ಥಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬರುವ ಕಾರಣ ಹಿಂದು-ಮುಸ್ಲಿಮರು ಸಹೋದರರಂತೆ ಬಾಳಬೇಕು ಎಂದರು. ಯುವಕ ಸಂಘದ ಪದಾಧಿಕಾರಿಗಳಾದ ಎಸ್.ರವಿಕುಮಾರ್, ಗಣಪತಿ, ರಾಜು ಹಾಜರಿದ್ದರು.