ನ್ಯೂಸ್

ಹರಿಯಾಣ ಚುನಾವಣೆಯಲ್ಲಿ ಮತಗಳ್ಳತನ ಸಾಭೀತು: ಪ್ರಿಯಾಂಕ ಖರ್ಗೆ

ಬೆಂಗಳೂರು:

ಹರಿಯಾಣ ಚುನಾವಣೆಯಲ್ಲಿ ಮತಗಳ್ಳತನ ಆಗಿರುವುದು ಸಾಬೀತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ರಾಹುಲ್ ಮತಗಳ್ಳತನ ಆರೋಪ ಬಗ್ಗೆ ಪ್ರತಿಕ್ರಿಯಿಸಿ, ಒಂದೇ ಮಹಿಳೆ 22 ಬಾರಿ ಮತದಾನ ಮಾಡಿದ್ದಾಳೆ ಬ್ರೆಜಿಲ್ ನಟಿಯೊಬ್ಬಳು 22 ಬಾರಿ, ಮತ್ತೊಬ್ಬಳು ಮಹಿಳೆ 200 ಬಾರಿ ಮತದಾನ ಮಾಡಿದ್ದಾರೆ. ಇದೆಲ್ಲವೂ ಅಕ್ರಮವಲ್ಲವೇ? ಎಂದು ಕೇಳಿದರು.

ರಾಹುಲ್ ಗಾಂಧಿ ಅವರ ಆರೋಪಕ್ಕೆ ಆಯೋಗ ಸರಿಯಾಗಿ ಉತ್ತರ ನೀಡುತ್ತಿಲ್ಲ. ಬಾಲಿಶವಾಗಿ ಚುನಾವಣಾ ಆಯುಕ್ತರು ನಡೆದುಕೊಳ್ಳುತ್ತಿದ್ದಾರೆ ಬಿಜೆಪಿಯವ್ರ ಆಯೋಗದ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

ಚುನಾವಣೆಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ ಎನ್ನುವುದನ್ನು ರಾಹುಲ್‌ಗಾಂಧಿ ಅವರು ದಾಖಲೆ ಸಹಿತ ನಿರೂಪಿಸಿದ್ದಾರೆ ಎಂದರು.

ಆಳಂದ ಕ್ಷೇತ್ರದಲ್ಲಿ ಆಗಿರುವ ಅಕ್ರಮದ ಬಗ್ಗೆ ಎರಡು ವಾರಗಳಲ್ಲಿ ಗೊತ್ತಾಗಲಿದೆ. ಇನ್ನೂ ಎರಡು ವಾರದಲ್ಲಿ ಎಲ್ಲವೂ ಹೊರಗೆ ಬರಲಿದೆ. ಆಳಂದದಲ್ಲಿ ಏನೇನಾಗಿದೆ ಎಲ್ಲವೂ ಗೊತ್ತಾಗಲಿದೆ ಚುನಾವಣಾ ಆಯೋಗ ರಾಹುಲ್ ಗಾಂಧಿ ಆರೋಪಕ್ಕೆ ಉತ್ತರ ನೀಡಬೇಕು ಎಂದು ಹೇಳಿದರು.

ಕೋರ್ಟ್ ಆದೇಶದಂತೆ ಸಭೆ:

ಕೋರ್ಟ್ ಆದೇಶದ ಪ್ರಕಾರ ಎಜಿ ಕಚೇರಿಯಲ್ಲಿ ಸಭೆ ನಡೆದಿದೆ. ಕಲಬುರಗಿ ಡಿಸಿ, ಎಸ್ಪಿ ಇಂದು ಸಭೆಗೆ ಬಂದಿದ್ದಾರೆ. ನಮ್ಮ ಉದ್ದೇಶ ಏನು? ಕಾನೂನು ಸುವ್ಯವಸ್ಥೆ ಕಾಪಾಡುವುದು ತಾನೆ? ಅದಕ್ಕೆ ತಕ್ಕಂತೆ ಕ್ರಮ ವಹಿಸಲಿದ್ದಾರೆ ಎಂದರು.

ಇವರು ರಾಜಕೀಯ ಬೆಳೆ ಬೇಯಿಸಿಕೊಳ್ಳೋಕೆ ಪಥ ಸಂಚಲನ ಮಾಡುತ್ತಿದ್ದಾರೆ ಲಕ್ಷಾಂತರ ಜನರನ್ನು ಸೇರಿಸುತ್ತೀವಿ ಅಂತಾರೆ ಅಲ್ಲೇನು ಉದ್ಯೋಗ ಮೇಳ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಅವರು ಹೇಳಿದಂತೆ ಅದೆ ಕ್ಷೇತ್ರದಲ್ಲಿ, ಅದೆ ಸಮಯದಲ್ಲಿ ಯಾಕೆ ಮಾಡಬೇಕು? ಬೇಕಿದ್ದರೆ ಮೋಹನ್ ಭಾಗವತ್ ಅವರನ್ನು ಕರೆಯಿಸಲಿ ಎಂದು ಪ್ರತಿಕ್ರಿಯಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿ, ನಮ್ಮ ಭಾಗದ ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡ್ತಿದ್ದೇವೆ ಈಗಾಗಲೇ ಸಚಿವರು ಉತ್ತರ ನೀಡಿದ್ದಾರೆ ಎಂದು ಖರ್ಗೆ ಹೇಳಿದರು.