ನ್ಯೂಸ್

ಹರಿಪ್ರಸಾದ್ ಪ್ರಕರಣ ಎಐಸಿಸಿಗೆ ಸಂಬಂಧಿಸಿದ್ದು: ಸತೀಶ್ ಜಾರಕಿಹೊಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತಿದ ಬಿ.ಕೆ. ಹರಿಪ್ರಸಾದ್‌ಗೆ ನೋಟಿಸ್ ನೀಡಿರುವ ವಿಚಾರ ಎಐಸಿಸಿಗೆ ಸಂಬಂಧಿಸಿದ್ದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಪ್ರಸಾದ್‌ಗೆ ಎಐಸಿಸಿ ನೋಟಿಸ್ ಕೊಟ್ಟಿದೆ. ಅವರು ಉತ್ತರ ಕೊಡಬೇಕು, ಕೊಡುತ್ತಾರೆ. ಎಐಸಿಸಿ ಕೊಟ್ಟ ಪತ್ರಕ್ಕೆ ಏನು ಉತ್ತರ ಕೊಡುತ್ತಾರೆ ಅದು ಅವರಿಗೆ ಬಿಟ್ಟಿದ್ದು. ಅದಕ್ಕೆ ಉತ್ತರ ಕೊಡಲು ನಾನು ಸಮರ್ಥ ಅಲ್ಲ.ಈ ಪ್ರಕರಣ ್ಲ

ಬೇರೆ ಬೇರೆ ವಿಷಯಗಳು ಒಳಗೊಂಡಿದೆ. ಹಾಗಾಗಿ ಇದು ಎಐಸಿಸಿ ಮತ್ತು ಹರಿಪ್ರಸಾದ್ ನಡುವಿನ ವಿಚಾರ ಎಂದು ಪ್ರತಿಕ್ರಿಯಿಸಿಸದರು. ಈ ವಿಚಾರ ನಮ್ಮ ಮಟ್ಟದಲ್ಲಿ ಇಲ್ಲ. ಎಐಸಿಸಿ ನಾಯಕರೇ ನಿರ್ಧರಿಸಬೇಕು ಎಂದರು.

ಅಧಿಕಾರಕ್ಕೆ ಕಾಂಗ್ರೆಸ್ ಕಿತ್ತಾಡಿಕೊಳ್ಳುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಅವರು, ಈಗ ಅವರು ಬರಲ್ಲ, ಐದು ವರ್ಷದ ಬಳಿಕ ಬರಬೇಕು. ಇದು ನಮ್ಮ ಪಕ್ಷದ ಆಂತರಿಕ ವಿಚಾರ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬುದಕ್ಕೆ ಸಾಕ್ಷಿ. ಈ ಬೆಳವಣಿಗೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತ ಪ್ರಶ್ನೆಗೆ, ಒಂದು ಬಾರಿ ನಮ್ಮ ಜತೆ ಇದ್ದರು. ಈಗ ಅವರ ಜತೆ ಹೋಗುತ್ತಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಬದಲಾದ ಸನ್ನಿವೇಶದಲ್ಲಿ ಅವರ ಜತೆ ಹೋಗಿದ್ದಾರೆ ಎಂದು ಉತ್ತರಿಸಿದರು.

ಕಾಂಗ್ರೆಸ್‌ಗೆ ರಮೇಶ್ ಜಾರಕಿಹೊಳಿ ಬರುವ ಬಗ್ಗೆ, ನಾವು ಎಲ್ಲರನ್ನೂ ಸ್ವಾಗತ ಮಾಡುತ್ತೇವೆ. ಯಾರು ಬೇಕಾದರೂ ಬರಬಹುದು. ನಾವು ಬರುವವರಿಗೆ ಸ್ವಾಗತ ಮಾಡೋರಷ್ಟೆ. ಸೇರಿಸಿಕೊಳ್ಳುವುದು ಸಿಎಂ, ಪಕ್ಷದ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.