ಮಾಲೂರು ಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಯಾದ ವಿಜಯಾನಂದ ಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ ಹೂಡಿ ವಿಜಯ್​ಕುಮಾರ್​ ಮಾತನಾಡಿದರು. ಪುರಸಭಾ ಸದಸ್ಯರಾದ ಭಾನುತೇಜ, ಲ್ಮಕಾಂತ್​, ವಾಲ್ಮೀಕಿ ಮುಖಂಡ ವೆಂಕಟೇಶ್​ ಇದ್ದರು 
ನ್ಯೂಸ್

ಶ್ರದ್ಧೆಯಿಂದ ದುಡಿದರೆ ಉನ್ನತ ಸ್ಥಾನ; ಬಿಜೆಪಿ ಮುಖಂಡ ಹೂಡಿ ವಿಜಯ್​ಕುಮಾರ್​ ಅಭಿಮತ; ಡಾ.ವಿಜಯ ಸಂಕೇಶ್ವರ ಆದರ್ಶಗಳನ್ನು ರೂಢಿಸಿಕೊಳ್ಳಲು ಕರೆ

Kolar

ಮಾಲೂರು: ಪ್ರತಿಯೊಬ್ಬರೂ ಮಾಡುವ ವೃತ್ತಿಯನ್ನು ಕಷ್ಟಪಟ್ಟು, ದೃಢಸಂಕಲ್ಪ ಮತ್ತು ಶ್ರದ್ಧೆಯಿಂದ ಮಾಡಿದರೆ ಡಾ.ವಿಜಯ ಸಂಕೇಶ್ವರ ಅವರಂತೆ ಉನ್ನತ ಸ್ಥಾನ ಅಲಂಕರಿಸಬಹುದು ಎಂದು ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ ಹೂಡಿ ವಿಜಯ್​ಕುಮಾರ್​ ಹೇಳಿದರು.

ಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಯಾದ "ವಿಜಯಾನಂದ' ಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಕ್​ ಕತ್ತರಿಸಿ ಮಾತನಾಡಿದರು.

ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ.ವಿಜಯ ಸಂಕೇಶ್ವರ ಅವರು ರಾಜ್ಯದಲ್ಲಿ ಒಂದು ಲಾರಿ ಜತೆಗೆ ದೃಢಸಂಕಲ್ಪದೊಂದಿಗೆ ಆರಂಭಿಸಿದ ಉದ್ಯಮ ಇಂದು ಅಂದಾಜು 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಹೊಂದಿ ರಾಜ್ಯಾದ್ಯಂತ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.

ಇವರ ಸಮಾಜಸೇವೆಯನ್ನು ಮೆಚ್ಚಿ ಭಾರತ ಸರ್ಕಾರವೂ ಪದ್ಮಶ್ರೀ ನೀಡಿ ಗೌರವಿಸಿದೆ. ರಾಜಕೀಯದಲ್ಲಿ ಸಂಸದರಾಗಿ ಉತ್ತಮ ಸೇವೆ ಮಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟಗಳನ್ನು ಆಲಿಸಿ, ಅವರಿಗೆ ಸೌಲಭ್ಯಗಳನ್ನು ಒದಗಿಸಿದ ಹೆಗ್ಗಳಿಕೆ ಇವರಿಗಿದೆ ಎಂದರು.

ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸುವ ಮೂಲಕ ಲಂಚಗುಳಿತನ ಮತ್ತು ಭ್ರಷ್ಟಾಚಾರ ನಿಮೂರ್ಲನಗೊಳಿಸಲು 2012ರಲ್ಲಿ ವಿಜಯವಾಣಿ ಪತ್ರಿಕೆ ಆರಂಭಿಸಿ ಜನತೆಯ ಕಷ್ಟಗಳಿಗೆ ಸ್ಪಂದಿಸಿದ್ದಾರೆ.

ರಾಜ್ಯದಲ್ಲಿ 8 ಲಕ್ಷ ಪ್ರಸರಣದೊಂದಿಗೆ ರಾಜ್ಯದ ನಂಬರ್​ 1 ಪತ್ರಿಕೆಯಾಗುವುದರ ಜತೆಗೆ ಜನತೆಯ ನೆಚ್ಚಿನ ಪತ್ರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ನೀಡುವಷ್ಟು ಉನ್ನತ ಮಟ್ಟದಲ್ಲಿ ಪತ್ರಿಕೆ ಬೆಳೆದಿರುವುದು ಶ್ಲಾನೀಯ ಎಂದರು.

ಡಾ.ವಿಜಯಸಂಕೇಶ್ವರ ಅವರ ಜೀವನ ಆಧಾರಿತ ವಿಜಯಾನಂದ ಸಿನಿಮಾದ ಮೂಲಕ ಅವರ ಜೀವನ, ಆದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕಿದೆ ಎಂದರು.

ರಾಜ್ಯ ಬಿಜೆಪಿ ಪಂಚಾಯತ್​ ರಾಜ್​ ಪ್ರಕೋಷ್ಠ ಸಮಿತಿ ಸದಸ್ಯ ಆರ್​.ಪ್ರಭಾಕರ್​ ಮಾತನಾಡಿ, "ವಿಜಯಾನಂದ' ಸಿನಿಮಾವು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಬಯೋಪಿಕ್​ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ನಟ, ನಟಿ ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಈ ಸಿನೆಮಾವು ಪ್ರತಿಯೊಬ್ಬರ ಮನಸ್ಸಿನಲ್ಲಿ ಉಳಿಯಲಿದೆ ಎಂದರು.

ವಿಜಯವಾಣಿ ಪತ್ರಿಕಾ ತಂಡದ ವತಿಯಿಂದ ವಿಜಯಾನಂದ ಸಿನಿಮಾ ಬಿಡುಗಡೆ ಪ್ರಯುಕ್ತ ಕೇಕ್​ ಕತ್ತರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ಸಂಭ್ರಮ ಆಚರಿಸಿದರು.

ಬಿಜೆಪಿ ಮುಖಂಡ ರವಿಕುಮಾರ್​, ಮಾಲೂರು ತಾಲೂಕು ವಿಜಯವಾಣಿ ಪತ್ರಿಕೆ ವರದಿಗಾರ ಎಂ.ವಿ.ರವೀಂದ್ರ, ಮಡಿವಾಳ ವಿಭಾಗದ ವರದಿಗಾರ ನಂಜುಂಡಪ್ಪ, ಪತ್ರಿಕಾ ಪ್ರತಿನಿಧಿಗಳಾದ ಮಣಿಕಂಠ, ಶಿವಾನಂದ, ಎಂ.ವಿ.ದೇವರಾಜು, ಶ್ರೀನಿವಾಸ್​, ಬಾಲಾಜಿ ಚಿತ್ರಮಂದಿರದ ಸಿಬ್ಬಂದಿ ರವಿಕುಮಾರ್​, ಗೋಪಾಲ್​ ಇನ್ನಿತರರು ಹಾಜರಿದ್ದರು.

ಯುವಕರಿಗೆ "ವಿಜಯಾನಂದ' ಉತ್ತಮ ಪ್ರೇರಣೆ

ಮಾಲೂರು: ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ.ವಿಜಯ ಸಂಕೇಶ್ವರ್​ ರಾಜ್ಯದ ಜನತೆಗೆ ಸೇವೆಯ ಮೂಲಕ ನೀಡಿರುವ ಕೊಡುಗೆ ಶ್ಲಾನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ.ಎಸ್​.ಶ್ರೀನಿವಾಸ್​ ಹೇಳಿದರು.

ಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ ಶುಕ್ರವಾರ "ವಿಜಯಾನಂದ' ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ದೃಢ ಸಂಕಲ್ಪ ಹಾಗೂ ಗುರಿಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು. ಯುವ ಸಮುದಾಯಕ್ಕೆ "ವಿಜಯಾನಂದ' ಸಿನಿಮಾ ಉತ್ತಮ ಪ್ರೇರಣೆಯಾಗಿದೆ ಎಂದು ಹೇಳಿದರು.

ಮಾಲೂರು ಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ "ವಿಜಯಾನಂದ' ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಕರವೇ ತಾಲೂಕು ಅಧ್ಯಕ್ಷ ಎಂ.ಎಸ್​.ಶ್ರೀನಿವಾಸ್​ ಮಾತನಾಡಿದರು. ಕರವೇ ತಾಲೂಕು ಯುವ ಟಕದ ಅಧ್ಯಕ್ಷ ಸಂತೋಷ್​ ಕುಮಾರ್​, ಪದಾಧಿಕಾರಿಗಳಾದ ಪ್ರತಾಪ್​, ಮೂರ್ತಿ, ಶಂಕರ್​, ಜಬಿವುಲ್ಲಾ ಇನ್ನಿತರರು ಹಾಜರಿದ್ದರು.