ಪತಿಯ ಮರಣದ ನಂತರ ಒಂಟಿಯಾಗಿ ವಾಸಿಸುತ್ತಿದ್ದ ರಾಣಿ ಅವರು, ಮುಂದೆ ಅಧ್ಯಯನ ಮಾಡುವ ಬಯಕೆಯನ್ನು ಹೊಂದಿದ್ದರು. ಅದರಂತೆ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ (HSE) 600 ಅಂಕಗಳಲ್ಲಿ ಒಟ್ಟು 346 ಅಂಕಗಳೊಂದಿಗೆ ಉತ್ತೀರ್ಣರಾಗಿ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ.
ಚೆನ್ನೈ: ಕೊಯಮತ್ತೂರಿನ 70 ವರ್ಷದ ರಾಣಿ ಎಂಬ ಮಹಿಳೆ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗುವ ಮೂಲಕ, ಕಲಿಕೆ ಹಾಗೂ ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಿಂದ ಸೈಬರ್ ದಾಳಿ; 2-3 ದಿನಗಳವರೆಗೆ ಎಟಿಎಂ ಸೇವೆ ಇರಲ್ಲ; ವಾಟ್ಸಾಪ್ ಸಂದೇಶ ವೈರಲ್ | Viral news
ಥೇಣಿ ಜಿಲ್ಲೆಯ ಬೋಡಿನಾಯಕನೂರಿನವರಾದ ರಾಣಿ 1972 ರಲ್ಲಿ 10 ನೇ ತರಗತಿಯನ್ನು ಪೂರ್ಣಗೊಳಿಸಿದ್ದರು. ತನ್ನ ಮೊದಲ ಪ್ರಯತ್ನದಲ್ಲೇ 11 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ, ಈ ವರ್ಷ 12 ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡರು.
ರಾಣಿ ತಮಿಳಿನಲ್ಲಿ 89, ಇತಿಹಾಸದಲ್ಲಿ 52 ಮತ್ತು ಇಂಗ್ಲಿಷ್‌ನಲ್ಲಿ 50 ಅಂಕಗಳನ್ನು ಗಳಿಸಿದ್ದು, ಇವರ ಸಾಧನೆಯು ಪರಿಶ್ರಮಕ್ಕೆ ಸಾಕ್ಷಿಯಾಗಿ, ಯಾವುದೇ ವಯಸ್ಸಿನಲ್ಲಿ ಶಿಕ್ಷಣವನ್ನು ಮುಂದುವರೆಸಬಹುದು ಎಂದು ಅನೇಕರನ್ನು ಪ್ರೇರೇಪಿಸುತ್ತದೆ.
(ಏಜೆನ್ಸೀಸ್)
2020 ರಲ್ಲಿ ನನ್ನ ಪತಿಯ ಮರಣದ ನಂತರ ನನ್ನ ಜೀವನಕ್ಕೆ ಮಹತ್ವದ ತಿರುವು ಸಿಕ್ಕಿತು. ನಾನು ನನಗಾಗಿ ಏನಾದರೂ ಮಾಡಬೇಕೆಂದು ಬಯಸಿದ್ದೆ. ನಾನು ಪಠ್ಯಪುಸ್ತಕಗಳನ್ನು ಖರೀದಿಸಿ 11 ನೇ ತರಗತಿ ಪರೀಕ್ಷೆಗೆ ಪ್ರತಿದಿನ ಅಧ್ಯಯನ ಮಾಡಿದೆ ಎಂದು ಅವರು ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಆಗ ನನ್ನ ಹಳ್ಳಿಯಲ್ಲಿ ಉನ್ನತ ವ್ಯಾಸಂಗಕ್ಕೆ ಯಾವುದೇ ಅವಕಾಶಗಳಿರಲಿಲ್ಲ. ಮದುವೆಯ ನಂತರ, ನಾನು ಚೆನ್ನೈಗೆ ಮತ್ತು ನಂತರ ಕೊಯಮತ್ತೂರಿಗೆ ಸ್ಥಳಾಂತರಗೊಂಡೆ, ಆದರೆ ಕುಟುಂಬದ ಜವಾಬ್ದಾರಿಗಳು ನನ್ನ ಶಿಕ್ಷಣವನ್ನು ಮುಂದುವರಿಸುವುದನ್ನು ತಡೆಯುತ್ತಿದ್ದವು ಎಂದು ಅವರು ಹೇಳಿದ್ದಾರೆ.