Allegations: ಮಲಯಾಳಂ ನಟಿ ಮತ್ತು ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್ ಮತ್ತು ನಂತರ ಬರಹಗಾರ್ತಿ ಹನಿ ಭಾಸ್ಕರನ್ ಮಾಡಿದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೇರಳ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮತ್ತು ಪಾಲಕ್ಕಾಡ್ ಶಾಸಕ ರಾಹುಲ್ ಮಮ್ಕೂಟತಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಾವು ಯಾವುದೇ ತಪ್ಪು ಮಾಡಿರುವುದರಿಂದ ರಾಜೀನಾಮೆ ನೀಡುತ್ತಿಲ್ಲ, ಬದಲಾಗಿ ಪಕ್ಷವು ತನ್ನ ಕೆಲಸದ ಮೇಲೆ ಗಮನಹರಿಸುವುದನ್ನು ಖಚಿತಪಡಿಸಿಕೊಳ್ಳಲು ಎಂದು ಮಮ್‌ಕೂಟತಿಲ್ ರಾಜೀನಾಮೆ ನೀಡುತ್ತಿದ್ದಾರೆ ಎಂದು ಹೇಳಿದರು.
"ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪಕ್ಷದ ಕಾರ್ಯಕರ್ತರಿಗೆ ಸಂಬಂಧಿಸಿದಂತೆ, ಮುಂದಿನ ವಿಧಾನಸಭಾ ಮತ್ತು ಪಂಚಾಯತ್ ಚುನಾವಣೆಗಳ ಮೊದಲು ಅವರಿಗೆ ಮಾಡಲು ಬಹಳಷ್ಟು ಕೆಲಸಗಳಿವೆ. ಅವರು ನನ್ನನ್ನು ಸಮರ್ಥಿಸಿಕೊಳ್ಳಲು ಸಮಯ ವ್ಯರ್ಥ ಮಾಡಲು ಸಾಧ್ಯವಿಲ್ಲ ಎಂದು ಮಮ್‌ಕೂಟತಿಲ್ ತಿಳಿಸಿದ್ದಾರೆ.
ಕಿರುಕುಳ ಆರೋಪಗಳಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಕಾಂಗ್ರೆಸ್ ಈಗಷ್ಟೇ ದೂರು ಸ್ವೀಕರಿಸಿದೆ. "ಅದು ಯಾರೇ ಆಗಿರಲಿ" ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೇರಳ ರಾಜ್ಯದ ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕಯೊಬ್ಬರು ಹಲವು ಬಾರಿ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ನಟಿ ಮತ್ತು ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್ ಆರೋಪಿಸಿದ್ದಾರೆ. ಆ ನಾಯಕ ತನ್ನನ್ನು ಹೋಟೆಲ್‌ಗೆ ಆಹ್ವಾನಿಸಿದ್ದಾನೆ ಎಂದು ಆಕೆ ಗಂಭೀರ ಆರೋಪ ಮಾಡಿದ್ದಾಳೆ. ಈ ಬಗ್ಗೆ ನಿಮ್ಮ ಪಕ್ಷಕ್ಕೆ ತಿಳಿಸುವುದಾಗಿ ಹೇಳಿದಾಗ, ಅವನು ಮುಂದುವರಿಯುವಂತೆ ಸವಾಲು ಹಾಕಿದ್ದಾನೆ ಎಂದು ನಟಿ ರಿನಿ ಪಕ್ಷದ ಹೆಸರು ಅಥವಾ ಭಾಗಿಯಾಗಿರುವ ರಾಜಕಾರಣಿಯ ಹೆಸರನ್ನು ಬಹಿರಂಗಪಡಿಸದೇ ಆರೋಪಿಸಿದ್ದಾಳೆ.
ರಿನಿ ಆ ರಾಜಕಾರಣಿಯ ಹೆಸರನ್ನು ಹೇಳದಿದ್ದರೂ, ಪಾಲಕ್ಕಾಡ್‌ನ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಎಂದು ಬಿಜೆಪಿ ಬೆರಳು ತೋರಿಸಿದೆ. ಅವರ ಕಚೇರಿ ಎದುರು ಪ್ರತಿಭಟನೆ ಮಾಡಿದ ಬಿಜೆಪಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಈ ಎಲ್ಲಾ ಬೆರಳವಣಿಗೆ ಬೆನ್ನಲ್ಲೆ ಮಮ್‌ಕೂಟತಿಲ್ ರಾಜೀನಾಮೆ ನೀಡಿದ್ದಾರೆ.(ಏಜೆನ್ಸೀಸ್)