ನ್ಯೂಸ್

ಸಿಡಿಲು ಬಡಿದು ಕೂಲಿ ಕಾರ್ಮಿಕ ಸಾವು

ಮಂಜುನಾಥ

ಹರಪನಹಳ್ಳಿ: ಸಿಡಿಲು ಬಡಿದು ತಾಲೂಕಿನ ತೆಲಿಗಿ ಗ್ರಾಮದ ಚನ್ನಗಿರಿ ಕೂಲಿ ಕಾರ್ಮಿಕ ಹಾಲೇಶಪ್ಪ (48) ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಜತೆಗೆ ಆತನ ಆಕಳು ಕೂಡ ಸತ್ತು ಹೋಗಿದೆ.

ಹಾಲೇಶಪ್ಪ ಇವರು ಜಮೀನೊಂದರಲ್ಲಿ ಆಕಳನ್ನು ಮೇಯಿಸುತ್ತಿದ್ದ ವೇಳೆ ಭಾನುವಾರ ಸಂಜೆ 5 ಗಂಟೆ ಸಿಡಿಲು ಬಡಿದಿದ್ದು ಹಾಲೇಶಪ್ಪನು ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಸ್ಥಳಕ್ಕೆ ತಹಶಿಲ್ದಾರ ಬಿ ವಿ ಗಿರೀಶ್ ಬಾಬು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲುವಾಗಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.