ರಿಪ್ಪನ್‌ಪೇಟೆ ಹೊಂಬುಜ ಜೈನಮಠದ ಶ್ರೀ ಪದ್ಮಾವತಿ ದೇವಿಯ ವಿಶೇಷ ಪೂಜೆ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು. 
ನ್ಯೂಸ್

ಪದ್ಮಾವತಿ ದೇವಿಗೆ ಹರಕೆ ಸಮರ್ಪಣೆ

ಸೋಮಶೇಖರ ಎನ್

ರಿಪ್ಪನ್‌ಪೇಟೆ: ಹೊಂಬುಜ ಜೈನಮಠದ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರಾವಣ ಶುಕ್ರವಾರ ವಿಶೇಷ ಪೂಜೆಗಳು ಜರುಗಿದವು.

ದೇವಿಗೆ ಭಕ್ತರು ಉಡಿ, ಕಾಣಿಕೆ, ಹರಕೆ ದ್ರವ್ಯಗಳನ್ನು ಸಮರ್ಪಿಸಿದರು. ಪರಿವಾರ ದೇವತೆಗಳಾದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡನಿ ದೇವಿ, ಶ್ರೀ ಸರಸ್ವತಿ ದೇವಿ, ತ್ರಿಕೂಟ ಜಿನಾಲಯ, ಬೋಗಾರ ಬಸದಿ, ಶ್ರೀ ಆದಿನಾಥ ಬಸದಿ, ಮಕ್ಕಳ ಬಸದಿ, ಕ್ಷೇತ್ರಪಾಲ ಬಸದಿಗಳಲ್ಲಿ ವಿಶೇಷ ಅರ್ಚನೆಗಳು ನಡೆಯಿತು. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ, ಶ್ರೀ ಪದ್ಮಾವತಿ ದೇವಿ ನಂಬಿದ ಭಕ್ತರನ್ನು ಸದಾ ಕಾಪಾಡುವ ತಾಯಿಯಾಗಿದ್ದಾಳೆ ಎಂದರು.