ರಿಪ್ಪನ್‌ಪೇಟೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನ ರಿಪ್ಪನ್‌ಪೇಟೆ ಘಟಕವನ್ನು ಉದ್ಘಾಟಿಸಲಾಯಿತು. ಎಚ್.ಎನ್.ಸೂರ್ಯನಾರಾಯಣ್, ಎಂ.ಆರ್.ಜಯೇಶ್, ಪುಷ್ಪಾ ಶೆಟ್ಟಿ, ಪಿಯುಸ್ ರೋಡ್ರಿಗಸ್, ಶ್ರೀಧರ್, ಸುರೇಖಾ ಮುರಳಿಧರ್ ಇತರರಿದ್ದರು.  
ನ್ಯೂಸ್

ಸಮಾಜ ಸೇವೆಯಿಂದ ನೆಮ್ಮದಿ ಲಭ್ಯ

ಶಿವಕುಮಾರ ಎಸ್.ಪಿ.

ರಿಪ್ಪನ್‌ಪೇಟೆ: ದುಡಿಮೆಯಿಂದ ಎಷ್ಟೇ ಸಂಪಾದಿಸಿದ್ದರೂ ಗಳಿಸಿದ್ದರಲ್ಲಿ ಒಂದಷ್ಟು ಭಾಗವನ್ನು ಸಮಾಜ ಸೇವೆಗಾಗಿ ವಿನಯೋಗಿಸಿದಾಗ ಸಿಗುವ ಮಾನಸಿಕ ನೆಮ್ಮದಿ ದೊಡ್ಡದು ಎಂದು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಚೇಂಬರ್ ಇಂಟರ್ ನ್ಯಾಷನಲ್ ರಿಪ್ಪನ್‌ಪೇಟೆ ನೂತನ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪರೋಪಕಾರ ಒಂದು ಭಾವ ಸಮ್ಮಿಲನ. ಇತರರಿಗೆ ಸಹಾಯ ಮಾಡಿದಾಗ ಅವರು ಅನುಭವಿಸುವ ಆನಂದವೇ ಅದ್ಭುತವಾದುದು ಎಂದರು.

ಸಮಾನ ಮನಸ್ಕರು ಸೇರಿ ರಚಿಸಿಕೊಂಡ ನಮ್ಮ ಸಂಸ್ಥೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸಮಾನತೆ, ಸೌಹಾರ್ದತೆ, ಏಕತೆ ಸ್ಥಾಪಿಸಿ ಸುಂದರ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ತೀರ್ಥಹಳ್ಳಿ ಶಾಖೆ ಅಧ್ಯಕ್ಷ ಎಚ್.ಎನ್.ಸೂರ್ಯನಾರಾಯಣ್, ಎಂ.ಆರ್.ಜಯೇಶ್, ಪುಷ್ಪಾ ಎಸ್. ಶೆಟ್ಟಿ, ಘಟಕದ ನೂತನ ಅಧ್ಯಕ್ಷ ಪಿಯುಸ್ ರೋಡ್ರಿಗಸ್, ಕಾರ್ಯದರ್ಶಿ ಶ್ರೀಧರ್, ಸುರೇಖಾ ಮುರಳಿಧರ್ ಇತರರಿದ್ದರು.