ನ್ಯೂಸ್

'ಅಪ್ಪ ದಿಲ್ಲಿಗೆ ಹೋಗ್ತಾನ, ಇಲ್ಲಿ ಮಗ...': ದಳಪತಿಗಳ ಮೇಲೆ ಆಲ್ಕೋಡ್​ ವಾಗ್ದಾಳಿ

ಕೊಪ್ಪಳ: ಮಾಜಿ ಸಚಿವ ಆಲ್ಕೋಡ್​​​ ಹನುಮಂತಪ್ಪ ಅವರು, ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ದೆಹಲಿ ಭೇಟಿಯನ್ನು ಉಲ್ಲೇಖಿಸಿ, ದಳಪತಿಗಳತ್ತ ಕಡು ಟೀಕೆ ಮಾಡಿದ್ದಾರೆ. ಜೆಡಿಎಸ್​ಗೆ ಸಿದ್ಧಾಂತ ತತ್ವವಿಲ್ಲ, ಭವಿಷ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ಕೊಪ್ಪಳದಲ್ಲಿ ಮಾತನಾಡಿದ ಆಲ್ಕೋಡ್, "ಅಪ್ಪ ದಿಲ್ಲಿಗೆ ಹೋಗ್ತಾನ, ಇಲ್ಲಿ ಮಗ ಬಿಜೆಪಿ ಲೂಟಿ ಮಾಡ್ತಿದೆ ಅಂತಾನ. ಯಾರನ್ನ ನಂಬೋದು? ಅಪ್ಪನ್ನಾ? ಮಗನ್ನಾ? ಜೆಡಿಎಸ್ ತಳವಿಲ್ಲದ ಮಗಿ ಆಗೈತಿ, ಅದಕ್ಕೆ ಸಿದ್ದಾಂತ ತತ್ವವಿಲ್ಲ" ಎಂದರು.

ಬೊಮ್ಮಾಯಿ, ಸಿದ್ದರಾಮಯ್ಯ, ಸಿಂಧ್ಯ ಇದ್ದಾಗ ಜೆಡಿಎಸ್ ಬಗ್ಗೆ ಅಭಿಮಾನವಿತ್ತು. ಈಗ ಮಕ್ಕಳಿಗೆ ಅಧಿಕಾರ ನೀಡುವುದಕ್ಕೆ ಸೀಮಿತವಾಗಿದೆ. ದೇವೇಗೌಡ, ಕುಮಾರಸ್ವಾಮಿ, ಅವರ ಅಣ್ಣ ಅಧಿಕಾರ ಮಾಡಿದರು. ಈಗ ಮಕ್ಕಳು ಬಂದಿದ್ದಾರೆ. ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂದ ಹನುಮಂತಪ್ಪ ಆಲ್ಕೋಡ, ಸಿಂಧಗಿಯಲ್ಲಿ ಮುಸ್ಲಿಮರು ಅವರಿಗೆ ಪಾಠ ಕಲಿಸಿದ್ದಾರೆ. ಈಗ ಜೆಡಿಎಸ್ ಜೋಳಗಿ ಹಾಕಿಕೊಂಡು ನಿಂತಿದೆ ಎಂದು ಅಣಕಿಸಿದರು.