ನ್ಯೂಸ್

ನೇಣು ಬಿಗಿದುಕೊಂಡು 108 ಆಂಬುಲೆನ್ಸ್​ ಚಾಲಕ ಆತ್ಮಹತ್ಯೆ

Haveri - Kariyappa Aralikatti

ಹಿರೇಕೆರೂರ: ಯಾವುದೋ ವಿಷಯಕ್ಕೆ ಮಾನಸಿಕ ಮಾಡಿಕೊಂಡ 108 ಆಂಬುಲೆನ್ಸ್​ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ದುರ್ಗಾ ನಗರದಲ್ಲಿ ಗುರುವಾರ ನಡೆದಿದೆ.

ಬಸನಗೌಡ ಸಿದ್ದಪ್ಪ ಪಾಟೀಲ (25) ಮೃತ ವ್ಯಕ್ತಿ.

ಈತ 108 ಆಂಬುಲೆನ್ಸ್​ನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯಾವುದೋ ವಿಷಯಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಮಾನಸಿಕವಾಗಿದ್ದ. ಇದರಿಂದ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.