ಹಾವೇರಿ: ಅನುದಾನದ ನೆಪ ಹೇಳಿ ಅಂಗವಿಕಲ ಮಹಿಳೆಯರು ಹಾಗೂ ವಿದ್ಯಾಥಿರ್ನಿಯರನ್ನು ವಸತಿ ನಿಲಯದಿಂದ ಹೊರಗೆ ಹಾಕಿರುವ ಟನೆ ಖಂಡಿಸಿ ಭಾರತ ವಿದ್ಯಾಥಿರ್ ೆಡರೇಷನ್ ವತಿಯಿಂದ ಭಾನುವಾರ ಇಲ್ಲಿಯ ಬಸವೇಶ್ವರ ನಗರದ ಕಲ್ಮೇಶ್ವರ ಗ್ರಾಮೀಣ ವಿದ್ಯಾಸಂಸ್ಥೆ ಎದುರು ಪ್ರತಿಭಟನೆ ನಡೆಸಲಾಯಿತು.
ಸಂಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಅಂಗವಿಕಲ ವಿದ್ಯಾಥಿರ್ನಿಯರು, ಮಹಿಳೆಯರ ಪುನರ್ವಸತಿಗಾಗಿ ಇಡೀ ಜಿಲ್ಲೆಯಲ್ಲಿ ಏಕೈಕ ವಸತಿ ನಿಲಯವಾಗಿದ್ದ ಕಲ್ಮೇಶ್ವರ ಸಂಸ್ಥೆ ಅನುದಾನದ ನೆಪದಿಂದಾಗಿ ಆಶ್ರಯ ಪಡೆಯುತ್ತಿರುವವರನ್ನು ಹೊರದೂಡುವುದು ಖಂಡನೀಯ.
ಸಂಸ್ಥೆಯನ್ನು ಏಕಾಏಕಿ ಮುಚ್ಚುವುದು ಸರ್ಕಾರದ ನಿಯಮಗಳ ಉಲ್ಲಂನೆ ಆಗಿದೆ. ಅನುದಾನ ನೆಪ ಬಿಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಟನಾ ಸ್ಥಳಕ್ಕೆ ಆಗಮಿಸಿದ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶ್ರೀನಿವಾಸ ಆಲದತಿರ್, ಕಲ್ಮೇಶ್ವರ ಸಂಸ್ಥೆ ಮುಖ್ಯಸ್ಥ ದಯಾನಂದ ಅವರಿಗೆ ದೂರವಾಣಿ ಸಂಪರ್ಕ ಮಾಡಿ ಯಾವುದೆ ಕಾರಣಕ್ಕೂ ಅಂಗವಿಕಲರನ್ನ್ನು ಹೊರಗಡೆ ಕಳಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಅಂಗವಿಕಲರನ್ನು ಸಂಸ್ಥೆಯೊಳಗೆ ಕಳುಹಿಸಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಅಂಗವಿಕಲರ ಒಕ್ಕೂಟದ ಸಾಮಾಜಿಕ ಕಾರ್ಯಕರ್ತೆ ಹಸೀನಾ ಹೆಡಿಯಾಲ, ಹೇಮಾ ಪ್ರಕಾಶ, ಸುಮಾ ದೊಡ್ಡಗೌಡರ, ಯಲ್ಲಮ್ಮ ವಾಲ್ಮೀಕಿ, ಲಲಿತಾ ಲಮಾಣಿ, ಗಿರಿಜಾ ಗೌಳಿ ಮತ್ತಿತರರು ಇದ್ದರು.