ನ್ಯೂಸ್

ವಿದ್ಯಾರ್ಥಿನಿಯಿಂದ ಡಿಸಿ ಜತೆ ಅಧಿಕಾರಿಗಳ ಸಭೆ!

Shivamogga

ಶಿವಮೊಗ್ಗ: ವಿಶ್ವ ಯುವ ಕೌಶಲ ದಿನದ ಅಂಗವಾಗಿ ಕೌಶಲ್ಯ ಅಭಿವೃದ್ದಿ ಇಲಾಖೆಯಿಂದ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ನಗರದ ಕಮಲಾ ನೆಹರೂ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಎನ್.ಹಂಸಿಣಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕೌಶಲ್ಯ ಸ್ಪೂರ್ತಿ ಶೀರ್ಷಿಕೆಯಡಿ ಇವರಿಗೆ ಜಿಲ್ಲಾಧಿಕಾರಿಗಳ ಕಾರ್ಯನಿರ್ವಹಣೆಯನ್ನು ಅರಿಯುವ ಅವಕಾಶ ಕಲ್ಪಿಸಲಾಗಿತ್ತು. ಅವರು ಆ.25ರಂದು ಜಿಲ್ಲಾಧಿಕಾರಿಗಳು ಭಾಗವಹಿಸುವ ವಿವಿಧ ಸಭೆ, ಕಾರ್ಯಕ್ರಮಗಳಲ್ಲಿದ್ದು ಡಿಸಿ ದಿನಚರಿ ಹೇಗಿರುತ್ತದೆ ಎಂಬುದನ್ನು ಅರಿತುಕೊಂಡರು.

ಈ ಕುರಿತು ಪ್ರತಿಕ್ರಿಯಿಸಿರುವ ಎನ್.ಹಂಸಿಣಿ, ಈ ಕಾರ್ಯಕ್ರಮದಿಂದ ಅನೇಕ ವಿಚಾರಗಳನ್ನು ಕಲಿಯಲು ಅವಕಾಶ ದೊರೆಯಿತು. ಜಿಲ್ಲಾಧಿಕಾರಿ ದಿನಚರಿ ಹೇಗಿರುತ್ತದೆ ಎಂಬುದನ್ನು ಸಮೀಪದಿಂದ ಗಮನಿಸಲು ಸಾಧ್ಯವಾಯಿತು. ಇದರಿಂದ ಸ್ಪೂರ್ತಿಗೊಂಡಿರುವ ನಾನು ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲ ಉಂಟಾಗಿದೆ ಎಂದಿದ್ದಾರೆ.

ದಿನದ ಕೊನೆಯಲ್ಲಿ ಡಿಸಿ ಡಾ.ಆರ್.ಸೆಲ್ವಮಣಿ ಅವರು ಎನ್.ಹಂಸಿಣಿ ಅವರನ್ನು ಅಭಿನಂದಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಉಪಸ್ಥಿತರಿದ್ದರು.