ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಶ್ವ ಪರಂಪರೆ ತಾಣ ಹಂಪಿಯ ವಿಜಯ ವಿಠ್ಠಲ ದೇಗುಲದ ಸಪ್ತಸ್ವರ ಹೊರಡಿಸುವ ಸಂಗೀತ ಮಂಟಪದ ಕಂಬಗಳ ನಾದ ಸ್ವರವನ್ನು ಕೇಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾಯೋಗಿಕವಾಗಿ ಕ್ಯೂಆರ್ ಕೋಡ್ ಸ್ಕಾö್ಯನರ್ ಅಳವಡಿಸಿದೆ. ಈ ಹೊಸ ಪ್ರಯೋಗ ಯಶಸ್ಸು ಕಂಡರೆ ಎಲ್ಲಾ ಸಂಗೀತ ಕಂಬಗಳ ಮುಂದೆ ಅಳವಡಿಸಲು ಸಿದ್ದತೆ ನಡೆಸಿದೆ.
ಹಂಪಿ ಸ್ಮಾರಕ ಸ್ಮಾರಕಗಳ ನಗರಿ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ವಿಭಿನ್ನ ರೀತಿಯ ಸ್ಮಾರಕಗಳ, ದೇಗುಲಗಳನ್ನು ಕಾಣ ಬಹುದು. ಅದರಲ್ಲಿ ವಿಜಯವಿಠಲ ದೇಗುಲದ ವಿಶೇಷತೆ ಪ್ರವಾಸಿಗರನ್ನು ಇನ್ನೂ ಹೆಚ್ಚು ಸೆಳೆಯುತ್ತದೆ. ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯ (1509-1529)ನ ಕಾಲದಲ್ಲಿ ಸಂಗೀತ ಮಂಟಪ ನಿರ್ಮಾಣವಾಗಿದೆ. ಈ ಮಂಟಪದಲ್ಲಿ ಒಟ್ಟು 46 ಕಂಬಗಳಿವೆ. ಸಪ್ತಸ್ವರ ಜತೆಗೆ ಮೃದಂಗ, ಘಂಟೆ, ತಾಳ, ಪಂಚ ವಾದ್ಯ ಸೇರಿ ನಾನಾ ಸ್ವರ ಹೊರಡಿಸುವ ಕಂಬಗಳನ್ನು ಈ ಸಂಗೀತ ಮಂಟಪ ಹೊಂದಿರುವುದು ವಿಶೇಷ. ಆದರೆ, ಕೆಲ ಪ್ರವಾಸಿಗರನ್ನು ಕಲ್ಲು, ವಾಹನಗಳ ಚಾವಿ ಸೇರಿದಂತೆ ಇತರೆ ಸಾಧನಗಳಿಂದ ಹೊಡೆದು ಹಾಳು ಮಾಡುತ್ತಿದ್ದರು. ಆದ್ದರಿಂದ ಇವುಗಳ ರಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂಗೀತ ಮಂಟಪಕ್ಕೆ ಪ್ರವೇಶವನ್ನು 2008ರಿಂದ ನಿರ್ಬಂಧ ಹಾಕಿತು. ಆದರೆ, ದೇಶ-ವಿದೇಶದ ಪ್ರವಾಸಿಗರಿಗೆ ಬಂದರೂ ಇಲ್ಲಿ ಬಂದರೂ ಕಲ್ಲುಗಳಿಂದ ಹೊರ ಬರುವ ಸಂಗೀತದಿAದ ವಂಚಿತರಾಗಿದ್ದರು. ಇದನ್ನು ಮನಗಂಡ ಕೇಂದ್ರ ಪುರಾತತ್ವ ಈ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ.
ಸಂಗೀತ ಮಂಟಪದ ಕಲ್ಲುಗಳ ಸಂಗೀತವನ್ನು ಇಲಾಖೆಯಲ್ಲಿನ ಪರಣಿತರಿಂದ ತಾಂತ್ರಿಕವಾಗಿ ರೆಕಾರ್ಡ್ ಮಾಡಲಾಗಿದೆ. ಕಳೆದ ಮೂರು ತಿಂಗಳಿAದ ಯೋಜನೆ ರೂಪಿಸಲಾಗಿದೆ. ಈ ಕಲ್ಲುಗಳ ಸಂಗೀತದ ಧ್ವನಿಯನ್ನು ಸ್ಪಷ್ಠವಾಗಿ ಕೇಳುವಂತೆ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಲಾಗಿದೆ. ಸಧ್ಯ ಮಂಟಪದ 5 ಕಡೆಯ ಸಂಗೀತ ಕಂಬಗಳ ಮುಂದೆ ಕ್ಯೂಆರ್ ಕೋಡ್ ಸ್ಕಾö್ಯನರ್ ಅಳವಡಿಸಲಾಗಿದೆ. ಸ್ಮಾಟ್ ಪೋನ್ ಇದ್ದವರು, ಇದರ ಸದುಪಯೋಗ ಪಡೆಯಬಹುದು. ಈ ಪ್ರಯೋಗ ಮೊಬೈಲ್ ನೇಟ್‌ವರ್ಕ್ ಸೇರಿದಂತೆ ಸರ್ವರ್‌ಗಳ ಸಮಸ್ಯೆ ಆಗದಂತೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೇ ಬಂದರೆ ಎಲ್ಲ ಕಂಬಗಳ ಮುಂದೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಹಂಪಿ ಹಲವು ವಿಷಯಗಳಿಂದ ವಿಖ್ಯಾತಿ ಪಡೆದಿದೆ. ಅದರಲ್ಲೂ ಕಲ್ಲಿನ ರಥ ಹಾಗೂ ಸಂಗೀತ ಮಂಟಪದಿAದ ಇನಷ್ಟು ಖ್ಯಾತಿ ಪಡೆದಿದೆ. ಆದರೆ ಕಳೆದ 15 ವರ್ಷಗಳಿಂದ ಸಂಗೀತ ಮಂಟಪಕ್ಕೆ ಪ್ರವೇಶವಿಲ್ಲದೇ ಪ್ರವಾಸಿಗರು ಇಲ್ಲಿನ ಕಲ್ಲುಗಳಿಂದ ಬರುವ ಕೇಳುವ ಭಾಗ್ಯ ಇರಲಿಲ್ಲ. ಕೇಂದ್ರ ಪುರಾತತ್ವ ಇಲಾಖೆ ಹೊಸ ಪ್ರಯತ್ನಕ್ಕೆ ಪ್ರವಾಸಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನು ಇನಷ್ಟು ಅಭಿವೃದ್ಧಿ ಪಡಿಸಿ ಇದರ ಮಹತ್ವದ ಅರಿವು ಮೂಡಿಸಬೇಕಿದೆ ಎಂದು ಪ್ರವಾಸಿಗರ ಆಶಯವಾಗಿದೆ.
ಹಂಪಿಯ ವಿಜಯ ವಿಠ್ಠಲ ದೇಗುಲ ಆವರಣದಲ್ಲಿರುವ ಸಂಗೀತ ಮಂಟಪ ಹಾಳಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮಂಟಪದ ಬಳಿ ತೆರಳಲು ನಿಷೇಧಿಸಲಾಗಿದೆ. ಗಣಾತಿಗಣ್ಯರು ಮಾತ್ರ ಶಿಲೆಗಳ ಸಂಗೀತ ಕೇಳುವ ಭಾಗ್ಯ ಹೊಂದಿದೆ. ಪುರಾತತ್ವ ಇಲಾಖೆಯ ಹೊಸ ಪ್ರಯೋಗ ಯಶಸ್ಸು ಕಂಡರೆ, ಎಲ್ಲ ಕಂಬಗಳ ಬಳಿ ಕ್ಯೂಆರ್ ಕೋಡ್ ಸ್ಕಾö್ಯನರ್ ಅಳವಡಿಸಲಾಗುತ್ತದೆ. ಇದರಿಂದ ಇಲ್ಲಿ ಪ್ರತಿಯೊಂದು ಪ್ರವಾಸಿಗರಿಗೆ ಅನುಕೂಲ ಆಗಲಿದೆ.
ಹಲವು ವರ್ಷಗಳಿಂದ ಪ್ರವಾಸಿಗರಿಗೆ ಸಂಗೀತ ಮಂಟಪದ ಪ್ರವೇಶ ನಿರ್ಬಂಧ ಹಾಕಲಾಗಿದೆ. ಪ್ರವಾಸಿಗರಿಗೆ ಇಲ್ಲಿನ ಸಂಗೀತದ ಅನುಭವ ನೀಡಲು ಇದು ಹೊಸ ಪ್ರಯೋಗಕ್ಕೆ ಮಾಡಲಾಗಿದೆ. ಪ್ರವಾಸಿಗರ ಪ್ರತಿಕ್ರೀಯೆ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. - ನಿಹಿಲ್ ದಾಸ್, ಅಧೀಕ್ಷಕರು, ಭಾರತೀಯ ಪುರಾತತ್ವ ಇಲಾಖೆ, ಹಂಪಿ