ಹಂಪಿಯ ವಿಜಯವಿಠಲದ ಕಲ್ಲಿನ ರಥಕ್ಕೆ ಶನಿವಾರ ವಿದೇಶಿ ಟೂರ್ ಆಪರೇಟರ್ಸ್ ತಂಡ ಭೇಟಿ ನೀಡಿ ಸಂಭ್ರಮಿಸಿದರು. 
ನ್ಯೂಸ್

ಹಂಪಿಗೆ ವಿದೇಶಿ ಟೂರ್ ಆಪರೇಟರ್ಸ್

ಮಂಜುನಾಥ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಶನಿವಾರ ವಿದೇಶಿ ಪ್ರವಾಸ ನಿರ್ವಾಹಕರು (ಟೂರ್ ಆಪರೇಟರ್ಸ್ ತಂಡ ಭೇಟಿ ನೀಡಿ ವಿವಿಧ ಸ್ಮಾರಕಗಳನ್ನು ನೋಡಿ ಸಂಭ್ರಮಿಸಿದರು.

ರಾಜ್ಯದ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ ಪರಿಚಯ ಮಾಡಿಕೊಳ್ಳುವ ಪ್ರವಾಸದ ಅಂಗವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್ಪೊ (ಕೆಐಟಿಇ) ಫ್ಯಾಮ್ ಟೂರ್ ದ್ವಿತೀಯ ಆವೃತ್ತಿಯ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಗಿತ್ತು. ಈ ಪ್ರವಾಸದ ಜತೆಗೆ ರಾಜ್ಯದ ಪ್ರವಾಸಿ ತಾಣಗಳ ವೈವಿಧ್ಯತೆ, ಇಲ್ಲಿನ ಸಂಸ್ಕೃತಿ, ಪರಂಪರೆ, ಪರಿಸರ ಪೂರಕ ಪ್ರವಾಸೋದ್ಯಮ ಅವಕಾಶ, ಸಾಹಸ ಪ್ರವಾಸೋದ್ಯಮ ಸಾಧ್ಯತೆ ಮೊದಲಾದ ವಿಷಯಗಳನ್ನು ಅಧ್ಯಯನ ನಡೆಸಲಾಗುತ್ತದೆ. ಈ ಮೂಲಕ ಪ್ರವಾಸೋಧ್ಯಮ ಅವಕಾಶಗಳ ಕುರಿತು ಬಳಿಕ ಚರ್ಚೆ, ನಿರ್ಧಾರಗಳು ಆಗಲಿವೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಹಂಪಿಗೆ ಬಂದಿಳಿದ ಆಸ್ಟ್ರೇಲಿಯಾ, ರಷ್ಯಾ, ಅಮೆರಿಕ, ಮಲೇಷ್ಯಾ, ಫಿಲಿಪ್ಪೀನ್ಸ್, ಶ್ರೀಲಂಕಾ, ಬೆಲ್ಜಿಯಂ, ಇಟಲಿ, ಲಾಟ್ವಿಯಾ, ಅರ್ಜೆಂಟಯನಾ ದೇಶಗಳ 19 ಟೂರ್ ಆಪರೇಟರ್ಸ್ ಹಾಗೂ ಇಬ್ಬರು ಭಾರತೀಯ ಟೂರ್ ಆಪರೇಟರ್ಸ್ ಹಂಪಿಯ ವಿಜಯ ವಿಠಲ ದೇಗುಲಕ್ಕೆ ಭೇಟಿ ನೀಡಿದರು. 50 ರೂ. ನೋಟು ಹಿಡಿದು ಕಲ್ಲಿನ ರಥ ವೀಕ್ಷಣೆ ಮಾಡಿ ಸಂಭ್ರಮಿಸಿದರು. ಸಂಗೀತ ಮಂಟಪ, ಕಮಲ ಮಹಲ್ ಸೇರಿದಂತೆ ಇತರೆ ಸ್ಮಾರಕಗಳನ್ನು ವೀಕ್ಷಣೇ ಮಾಡಿದರು. ಇಲ್ಲಿನ ಶ್ರೀಮಂತ ಕಲೆ ಮತ್ತು ಸಂಸ್ಕೃತಿಗೆ ಮನಸೋತ ವಿದೇಶಿ ಟೂರ್ ಆಪರೇಟರ್ಸ್ ಹಂಪಿಯ ಸೊಬಗನ್ನು ವೀಕ್ಷಿಸಿ ಖುಷಿಗೊಂಡರು.

ಹAಪಿ ಸೇರಿದಂತೆ ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಲಕ್ಕುಂಡಿ, ಮೈಸೂರು, ವನ್ಯಧಾಮ, ಗಿರಿಧಾಮಗಳು, ಕರಾವಳಿ ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಮತ್ತೆ ಫೆ.25ಕ್ಕೆ ಮತ್ತೊಮ್ಮೆ ಹಂಪಿಗೆ ಬರಲಿದ್ದಾರೆ. ಪ್ರವಾಸಿ ಮಾರ್ಗದರ್ಶಿಗಳಾದ ಶರತ್ ಮತ್ತು ಮಂಜುನಾಥ ಗೌಡ ಹಂಪಿಯ ಇತಿಹಾಸದ ಮಾರ್ಗದರ್ಶನ ನೀಡಿದರು. ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿಗೆ ತಿಳಿಸಿದರು.