ಒಂಥರಾರೋಲ್ವಾಡೆಲ್. ಕಾರಣವಿಷ್ಟೇ. ಆರಂಭದಲ್ಲಿ ಪಂದ್ಯ ಭಾರತೀಯರಿಂದ ದೂರ ಸಾಗುತ್ತಿತ್ತು. ಆದರೆ ಸೂರ್ಯಕುಮಾರ ಯಾದವ್ನ ಚಾಕಚಕ್ಯತೆ, ರೋಹಿತ್ನ ಸಮರ್ಥ ನಾಯಕತ್ವ ಮತ್ತು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಹೆಣೆದ ರಣತಂತ್ರ ಫಲಿಸಿತು. ಕಪ್ವುುಡಿಗೇರಿತು. ನೂರಾರು ಭಾರತೀಯರ ಕನಸು ನನಸಾಯಿತು. ಇದೇ ಮಾದರಿಯಲ್ಲಿ ವೈಯಕ್ತಿಕವಾಗಿ ಪ್ರತಿಯೊಬ್ಬರೂ ತಮ್ಮ ಬದುಕು ಅಥವಾ ವೃತ್ತಿ ಜೀವನದ ಹಾದಿಯಲ್ಲಿ ಗುರಿಯತ್ತ ಚಿತ್ತವಿಟ್ಟು ಸಾಗಬೇಕು. ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ ಮುಂದೆ ಯಶಸ್ಸುತನ್ನಿಂತಾನೇ ಅರಸಿ ಬರುತ್ತದೆ. ಆದರೆ ಯತ್ನ ಪ್ರಾಮಾಣಿಕವಾಗಿರಬೇಕಷ್ಟೇ.ಇಲ್ಲಿ ನಾವು ನೀವೆಲ್ಲರೂ ಕಲಿಯಬೇಕಾದ ಪಾಠ ಬಹಳಷ್ಟಿದೆ. ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡರನ್ನೇ ತೆಗೆದುಕೊಳ್ಳಿ. ‘ದಿ ವಾಲ್’ ಖ್ಯಾತಿಯ ರಾಹುಲ್ ಚಾಂಪಿಯನ್ಕೋಚ್ ಎಂಬ ಖ್ಯಾತಿಗೆ ಭಾಜನರಾದರು. ಇದರ ಹಿಂದೆ
ಅದೆಷ್ಟು ಸದ್ದಿಲ್ಲದ ಶ್ರಮ, ಶ್ರದ್ಧೆ ಮತ್ತು ಪ್ರಯತ್ನವಿತ್ತು ಎಂಬುದು ಇಲ್ಲಿ ಗಮನಾರ್ಹ. ಮೈದಾನದಲ್ಲಿ ಕೊಹ್ಲಿ ಮತ್ತು ರೋಹಿತ್ರ ಕೇಕೆಯ ಹಿಂದಿನ ಧೈರ್ಯ ರಾಹುಲ್. ಲೋಪವಿಲ್ಲದೇ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಮನದಟ್ಟಾಗಿಸಿದ್ದ ರಾಹುಲ್ ಕಾರ್ಯವೈಖರಿ, ಮನೋಬಲ, ಗೆಲುವಿನ ಛಲ ಎಲ್ಲರಿಗೂ ಮಾದರಿ. ಇನ್ನೇನು ನೇಪಥ್ಯಕ್ಕೆ ಸರಿದೇ ಬಿಟ್ಟ ಎನ್ನುವ ಹಂತದಲ್ಲಿ ಫಿನಿಕ್ಸ್ನಂತೆ ಎದ್ದು ಬಂದ ರಾಹುಲ್ನ ಈ ಕಮಾಲ್ ಇಡೀ ಮನುಕುಲಕ್ಕೆ ಒಂದು ಸ್ಪೂರ್ತಿದಾಯಕ ನಡೆ. ಇನ್ನು ಮೈದಾನದಲ್ಲಿ ನಾಯಕ ರೋಹಿತ್ಶರ್ವ ವರ್ತನೆ ಹೇಗಿತ್ತು ಎಂಬುದು ಕೂಡ ವಿಶೇಷವೇ. ಬಲಾಢ್ಯ ಹರಿಣಿಗಳಿಗೆ(ದಕ್ಷಿಣ ಆಫ್ರಿಕಾ) ಭಾರತ ನೀಡಿದ ಟಾರ್ಗೆಟ್ ದೊಡ್ಡ ಮಾತೇನಾಗಿರಲಿಲ್ಲ. ಅತಿಯಾದ ಆತ್ಮವಿಶ್ವಾಸ ಮತ್ತು ಟೀಂ ಇಂಡಿಯಾದ ಸಾಂಘಿಕ ಹೋರಾಟದ ಎದುರು ಅವರು ಮಂಡಿಯೂರಬೇಕಾಯಿತು. 6 ಜನ ಅಗ್ರಗಣ್ಯ ಬ್ಯಾಟ್ಸಮನ್ವುತ್ತು 45 ಎಸೆತ ಬಾಕಿ ಇರುವಾಗಲೇ ಗೆಲುವು ನಮ್ಮದೇ ಎಂದು ಬೀಗಿದ್ದ ಆಫ್ರಿಕನ್ನರ ಪಾಲಿಗೆ ಸೂರ್ಯಕುಮಾರ ಹಿಡಿದ ಆ ಒಂದು ಕ್ಯಾಚ್ಇಡೀ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು. ಇಡೀ ವಿಶ್ವಕಪ್ನುದ್ದಕ್ಕೂ ಒಂದೇ ಒಂದು ಪಂದ್ಯ ಸೋಲದ ಭಾರತೀಯ ತಂಡದ ಅದಮ್ಯ ಉತ್ಸಾಹ ಮತ್ತೆ ಪುಟಿದೆದ್ದಿತು. ಟ್ರೋಫಿಗೆ ಸನಿಹದತ್ತ ಕರೆದೊಯ್ದ ವಿಕೆಟ್ಪತನಗಳು ಅದ್ಭುತ ಸಾಧನೆಯ ಕ್ಷಣವನ್ನು ಸಾರುವಂತಿತ್ತು.
ಈ ಪಂದ್ಯದ ಉದಾಹರಣೆ ಮೂಲಕ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ, ನೀತಿಗಳು ಧೈರ್ಯ, ಸ್ಥೈರ್ಯದ ನಿಲುವುಗಳು ಬಹಳಷ್ಟಿವೆ. ಯಶಸ್ಸು ರಾತ್ರೋ ರಾತ್ರಿ ಸಿಗುವಂಥದಲ್ಲ. ಸಹನೆ, ತಾಳ್ಮೆಯಂತಹ ಗುಣಗಳಿದ್ದಾಗ ಅದು ಸಾಧ್ಯ.
ಭಾರತ ತಂಡ ವಿಶ್ವಕಪ್ ಗೆದ್ದ ಮಾದರಿಯಲ್ಲಿ ಸಾಧನೆಯ ಶಿಖರ ಏರುವಾಗ ಪ್ರತಿಯೊಬ್ಬರೂ ಎಡವುವುದು, ಬೀಳುವುದು ಸಹಜ. ಆದರೆ ದಾರಿಯಿಂದ, ಯತ್ನದಿಂದ ವಿಮುಖರಾಗದೇ ಗೆದ್ದೇ ಗೆಲ್ಲುವೆ ಒಂದು ದಿನ, ಆಗ ಶಿಖರದ ತುದಿಗೆ ನಾನಿದ್ದರೆ ನನ್ನ ಪಾದದಡಿಗೆ ಅಡೆತಡೆಗಳು ಇರುತ್ತವೆ ಎನ್ನುವುದನ್ನು ಸಾಬೀತುಪಡಿಸಬಹುದು. ಮತ್ತೊಬ್ಬರಿಗೆ ನಮ್ಮ ಸಾಧನೆ ಮಾದರಿಯಾಗಬಹುದು. ಹಲವರಿಗೆ ಸ್ಪೂರ್ತಿಯ ಸೆಲೆಯಾಗಬಹುದು. ಪ್ರೇರಣೆಯಾಗಬಹುದು. ಟೀಂ ಇಂಡಿಯಾ ತಂತ್ರಗಾರಿಕೆಯಲ್ಲಿ ಹೇಗೆ ಎಡವಲಿಲ್ಲವೋ ಹಾಗೆ ನಾವು ಕೂಡ ನಮ್ಮ ಜೀವನದ ರಣನೀತಿಯಲ್ಲೂ
ಎಡವಬಾರದು. ಮುಗ್ಗರಿಸಿದರೂ ಸಾಮರ್ಥ್ಯ ಕುಂದಬಾರದು. ಅನುಭವ, ಜ್ಞಾನ ಮತ್ತು ತಂತ್ರಗಾರಿಕೆ ಜತೆ ಜತೆಗೆ ಸಂಪೂರ್ಣ ಶ್ರದ್ಧೆ, ಪ್ರಯತ್ನಶೀಲ ಮನೋಭಾವ ನಮ್ಮದಾಗಿರಬೇಕು. ಆಗದು ಎಂದು ಕೈ ಚೆಲ್ಲಿ ಕುಳಿತುಕೊಳ್ಳದೇ ಮನೋಬಲ, ಸಾತ್ವಿಕ ಇಚ್ಛಾಶಕ್ತಿ ಮೂಲಕ ‘ಹಮ್ೋಂಗೆ ಕಾಮಯಾಬ್ಏಕ್ದಿನ್’ ಎಂಬುದನ್ನು ಇಡೀ ಜಗತ್ತಿಗೆ ತೋರಿಸಬಹುದು. ನಮ್ಮ ಸಾಧನೆಯ ಸದ್ದನ್ನು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುವಂತಾಗಿಸಿದ ಟೀಂ ಇಂಡಿಯಾದ ಈ ಗೆಲುವು ಕಳಪೆ ಪ್ರದರ್ಶನ ನೀಡಿದಾಗ ವ್ಯಂಗ್ಯದ ಚಪ್ಪಾಳೆ ತಟ್ಟಿದವರ ಮುಖಕ್ಕೆ ಹೊಡೆದಂತಿತ್ತು. ಹಾಗೆಯೇ ನಮ್ಮ ಸಾಧನೆ ಕೂಡ ನಮ್ಮನ್ನು ಟೀಕಿಸುವವರಿಗೆ ನೀಡುವ ಉತ್ತರವಾಗಿರಬೇಕು. ಅವರು ಕೂಡ ಅಹುದಹುದು ಎನ್ನುವಂತಿರಬೇಕೇ ಹೊರತು ದ್ವೇಷದ ಸಾಧನೆಯಾಗಬಾರದು.