ನ್ಯೂಸ್

ಹಳ್ಳಿಮೇಷ್ಟ್ರು 247: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

manjunatha
ದೈನಂದಿನ ಬಳಕೆಯ ವಾಕ್ಯಗಳು

ಅವಳು ಅವರ ನೆನಪಿನಲ್ಲೇ ಕೊರಗುತ್ತಾ ಹಾಸಿಗೆ ಹಿಡಿಯದಿದ್ದರೆ ಅಷ್ಟೇ ಸಾಕು!
I wish she wouldn’t sit brooding languishing in his thoughts!

ಈ ದಿನಗಳಲ್ಲಿ ನನ್ನ ಹೆಂಡತಿ ನಮಗೊಂದು ಹೆಣ್ಣುಮಗು ಬೇಕೆಂದು ಅಪೇಕ್ಷೆಪಡುತ್ತಿದ್ದಾಳೆ.

My wife is getting / feeling broody / clucky for a daughter nowadays.

ನಿನ್ನ ಅಣ್ಣನಂತೆ / ಅಣ್ಣನ ಸ್ಥಾನದಲ್ಲಿ ನಿಂತು ನಾನು ನಿನಗೊಂದು ಮಾತು ಹೇಳಲೆ?

Shall I give you a brotherly advice?

ಯಾವತ್ತೂ ಬಂದು ಮಿಕ್ಸಿ ಎರವಲು ಪಡೆಯುವ ಪಕ್ಕದ ಮನೆಯವರೆಂದರೆ ನನ್ನ ಅಮ್ಮ ಸಿಡಿಮಿಡಿಗೊಳ್ಳುತ್ತಾಳೆ.

My mother gets browned off with our neighbour borrowing the mixer many a time.

ದಯವಿಟ್ಟು ನಾನು ನಿಮ್ಮನ್ನು ಮೆಚ್ಚಿಸುವುದಕ್ಕಾಗಿ ಏನೇನೋ ಮಾಡುತ್ತಿದ್ದೇನೆಂದು ತಿಳಿಯಬೇಡಿ.

Please don’t think that I am trying to brown-nose you.

ಹೊರರೋಗಿ ವಿಭಾಗದಲ್ಲಿ ನನ್ನ ಸರದಿಗಾಗಿ ಕಾಯುತ್ತಿದ್ದ ನಾನು ಸಂಚಿಕೆಗಳಲ್ಲಿ ಕಣ್ಣು ಹಾಯಿಸುತ್ತಾ ಕುಳಿತೆ.

I sat at the OPD waiting for my turn, browsing through the magazines on the table.

ಕೆಲವು ಮಾವಿನಹಣ್ಣುಗಳು ಗುದ್ದಿ ಹೋಗಿದ್ದವು / ಮಾವಿನಹಣ್ಣುಗಳ ಮೇಲೆ ತರಚಿದ ಗಾಯಗಳಿದ್ದವು.

Some mangoes had bruises on them.

ನೀವು ಕೈಗಳಲ್ಲಿ ಗಾಯ ಹೇಗೆ ಮಾಡಿಕೊಂಡಿರಿ? / ತರಚು ಗಾಯ ಹೇಗಾಯ್ತು?

How did you bruise your hands?