The floor of that old house was askew as it was handmade.
ಈ ಮನೆಗೆ ಎಷ್ಟು ಬೆಲೆ ಕೇಳುತ್ತಿದ್ದಾರೆ / ಈ ಮನೆ ಮಾರಲು ಕೇಳುತ್ತಿರುವ ಬೆಲೆ ಎಷ್ಟು?
What is the asking price of this house?
ನನ್ನ ಕಾಲು ಜೋಮು ಹಿಡಿದಿದ್ದರಿಂದ ನನಗೆ ಅಲುಗಾಡಲಾಗಲಿಲ್ಲ.
I couldn’t move as my leg was asleep.
ವಾಸ್ತುಪ್ರಕಾರ ಈ ಮನೆಯಲ್ಲಿ ಅಡುಗೆಮನೆ ಈಶಾನ್ಯ ದಿಕ್ಕಿಗೂ ಮಾಲೀಕರು ಮಲಗುವ ಕೋಣೆ ಉತ್ತರ ದಿಕ್ಕಿಗೂ ಮುಖ ಮಾಡಿಕೊಂಡು ಇದೆ.
In this house, kitchen is south eastern aspect and master bedroom is northern aspect as per Vastu.
ನಮ್ಮ ಗ್ರಾಮ ಪಂಚಾಯತ್ ಸದ್ಯದಲ್ಲೇ ಈ ಮಣ್ಣಿನ ರಸ್ತೆಯನ್ನು ಡಾಮರೀಕೃತಗೊಳಿಸಲಿದೆ.
Our village panchayat is going to asphalt this mud road shortly.
ನಾನು ದೊಡ್ಡವನಾದಾಗ ವೈದ್ಯನಾಗಬೇಕೆಂಬ ಹಂಬಲ ಹೊಂದಿದ್ದೆ.
I had aspired to be a doctor when I grow up.
ನಿಮ್ಮ ಮೇಲೆ ದಾಳಿ ಮಾಡಿದವನು ಹೇಗಿದ್ದ? ಅವನನ್ನು ವಿವರಿಸಬಲ್ಲಿರಾ?
How was the assailant? Can you describe him?
40 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿರುವುದರಿಂದ ನಾನು ಬ್ಯಾಂಕಿನ ಒಂದು ಬೃಹತ್ ಆಸ್ತಿ!
I am a big asset of the bank as I have taken a loan of Rs. 40 lacs!