ಇಸ್ಲಾಮಾಬಾದ್: ಬಾಂಗ್ಲಾದೇಶದಿಂದ ಭಾರತದ ಮೇಲೆ ದಾಳಿ ಮಾಡಲು ಹಫೀಜ್ ಸಯೀದ್(Hafiz Saeed) ಸಂಚು ರೂಪಿಸುತ್ತಿದ್ದಾನೆ ಎಂದು ಲಷ್ಕರ್ ಕಮಾಂಡರ್ ಸೈಫುಲ್ಲಾ ಸೈಫ್ ಹೇಳುತ್ತಿರುವ ವಿಡೀಯೊ ವೈರಲ್ ಆಗುತ್ತಿದೆ.
ಈ ಬಗ್ಗೆ ಪಾಕಿಸ್ತಾನದ ಖೈರ್‌ಪುರ್ ತಮಿವಾಲಿಯಲ್ಲಿ ನಡೆದ ಱಲಿಯ ವಿಡಿಯೋದಲ್ಲಿ ಹಫೀಜ್ ಸಯೀದ್ ಸುಮ್ಮನೆ ಕುಳಿತಿಲ್ಲ, ಬಾಂಗ್ಲಾದೇಶದ ಮೂಲಕ ಭಾರತದ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದಾನೆ ಎಂದು ಉಗ್ರ ಸೈಫ್ ತಿಳಿಸಿದ್ದಾನೆ.
ತನ್ನ ಜನರು ಬಾಂಗ್ಲಾದೇಶದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಭಾರತಕ್ಕೆ ಸೂಕ್ತ ಉತ್ತರ ನೀಡಲು ಸಿದ್ಧರಾಗಿದ್ದಾರೆ ಎಂದು ಸೈಫ್ ಹೇಳಿಕೊಂಡಿದ್ದಾನೆ. ಅಲ್ಲದೆ, ಸ್ಥಳೀಯ ಯುವಕರನ್ನು ಜಿಹಾದ್‌ಗೆ ಸಿದ್ಧಪಡಿಸಲು ಮತ್ತು ಭಯೋತ್ಪಾದಕ ತರಬೇತಿ ನೀಡಲು ಬಾಂಗ್ಲಾದೇಶಕ್ಕೆ ಸಹಚರನನ್ನು ಕಳುಹಿಸಲಾಗಿದೆ ಎಂದು ಸೈಫುಲ್ಲಾ ತಿಳಸಿದ್ದಾನೆ. ಬಾಂಗ್ಲಾದೇಶ ಈಗ ಭಾರತದ ವಿರುದ್ಧದ ಪಿತೂರಿಗಳಿಗೆ ಬಳಸಬಹುದಾದ ಒಂದು ರೀತಿಯ ಲಾಂಚ್‌ಪ್ಯಾಡ್ ಆಗುತ್ತಿದೆ ಎಂದಿದ್ದಾನೆ.
ಇದನ್ನೂ ಓದಿ: ಅಮೆರಿಕದಲ್ಲಿ ಎಂದಿನಂತೆ ನಿದ್ರೆಗೆ ಜಾರಿದ ಆಂಧ್ರ ಯುವತಿ ಬೆಳಗ್ಗೆ ಕಣ್ಣು ತೆರೆಯಲೇ ಇಲ್ಲ! ಏನಾಯ್ತು ಆ ರಾತ್ರಿ? Young girl
ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಮಕ್ಕಳ ಉಪಸ್ಥಿತಿಯೂ ಇದ್ದು, ಸೈಫುಲ್ಲಾ ಭಾಷಣದ ಸಮಯದಲ್ಲಿ ಅನೇಕ ಮಕ್ಕಳು ಹಾಜರಿದ್ದರು. ಇದು ಕೆಲವು ಭಯೋತ್ಪಾದಕ ಸಂಘಟನೆಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಮಕ್ಕಳನ್ನು ಬಳಸುತ್ತಿವೆ ಎಂದು ಸೂಚಿಸುತ್ತದೆ. ವೀಡಿಯೊವನ್ನು ಆಧರಿಸಿ, ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಮಕ್ಕಳನ್ನು ಜಿಹಾದಿ ಸಿದ್ಧಾಂತಕ್ಕೆ ಒಳಪಡಿಸುತ್ತಿವೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ.
ತನ್ನ ಭಾಷಣದಲ್ಲಿ ಪಾಕಿಸ್ತಾನಿ ಸೇನೆಯನ್ನು ಹೊಗಳಿದ ಸೈಫುಲ್ಲಾ, ಮೇ 9-10ರ ರಾತ್ರಿಯ ನಂತರ ಪಾಕಿಸ್ತಾನ ಪ್ರತಿಕ್ರಿಯಿಸಿದೆ. ಆದರೆ ಅಮೆರಿಕ ಮತ್ತು ಬಾಂಗ್ಲಾದೇಶಗಳು ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿವೆ ಎಂದು ವರದಿಯಾಗಿದೆ.
ಇದೆಲ್ಲವೂ ಪ್ರಸ್ತುತ ಸೈಫುಲ್ಲಾ ಹೇಳಿಕೆಗಳು ಮತ್ತು ವೈರಲ್ ವೀಡಿಯೊವನ್ನು ಆಧರಿಸಿದೆ. ಇಂತಹ ಗಂಭೀರ ಆರೋಪಗಳಿಗೆ ಸ್ವತಂತ್ರ ತನಿಖೆ ಮತ್ತು ಅಧಿಕೃತ ದೃಢೀಕರಣದ ಅಗತ್ಯವಿದೆ. (ಏಜೆನ್ಸೀಸ್)