ನವದೆಹಲಿ: ಅಮೆರಿಕದ ಎಚ್-1ಬಿ ವೀಸಾ ಪ್ರೋಗ್ರಾಂನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳು ಇಂದಿನಿಂದ ಅಂದರೆ ಶುಕ್ರವಾರ (ಜನವರಿ 17) ರಿಂದ ಜಾರಿಗೆ ಬಂದಿವೆ. H-1B ವೀಸಾ ಪ್ರೋಗ್ರಾಂನಲ್ಲಿನ ಬದಲಾವಣೆಗಳ ಉದ್ದೇಶವು ವಿದೇಶಿ ಪ್ರತಿಭೆಗಳ ನೇಮಕಾತಿಯಲ್ಲಿ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಚಿತಪಡಿಸುವುದು ಎಂದು ಅಮೆರಿಕ ಆಡಳಿತವು ಹೇಳುತ್ತದೆ.
H-1B ವೀಸಾವು ಅಮೆರಿಕದಲ್ಲಿನ ಉದ್ಯೋಗದಾತರಿಗೆ ನಿರ್ದಿಷ್ಟ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅನುಮತಿಸುತ್ತದೆ. ಈ ವೀಸಾಗೆ ಹೆಚ್ಚಿನ ಜ್ಞಾನದ ಅಗತ್ಯವಿದೆ. ಭಾರತೀಯ ವೃತ್ತಿಪರರು ಇದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. 2023ರಲ್ಲಿ 3,86,000 H-1B ವೀಸಾಗಳಲ್ಲಿ ಶೇಕಡಾ 72.3ರಷ್ಟು ಭಾರತೀಯರಿಗೆ ನೀಡಲಾಗಿದೆ. ಇದರರ್ಥ ವೀಸಾ ಪ್ರೋಗ್ರಾಂಗೆ ಪರಿಚಯಿಸಲಾದ ಸುಧಾರಣೆಗಳಿಂದ ಭಾರತೀಯ ಉದ್ಯೋಗಾಂಕ್ಷಿಗಳು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ.
ಈ ಸುಧಾರಣೆಗಳು ಭಾರತೀಯ ವೃತ್ತಿಪರರಿಗೆ ಅನೇಕ ಸಾಧ್ಯತೆಗಳನ್ನು ತೆರೆಯುತ್ತದೆ. ಭಾರತೀಯರ ಹೆಚ್ಚಿನ ಭಾಗವಹಿಸುವಿಕೆಯಿಂದಾಗಿ ಈ ಬದಲಾವಣೆಗಳು ಅವರಿಗೆ ವಿಶೇಷವಾಗಿ ತಾಂತ್ರಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಹೆಚ್ಚು ಪ್ರಯೋಜನಕಾರಿಯಾಗಬಹುದು. F-1 ವೀಸಾದಿಂದ H-1Bಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಪರಿಹಾರವನ್ನು ಪಡೆಯುತ್ತಾರೆ.(ಏಜೆನ್ಸೀಸ್)