ಕಾಬೂಲ್: ಮಾ. 25ರಂದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನ ಗುರುದ್ವಾರದ ಮೇಲೆ ನಡೆದ ದಾಳಿ ಸಂಚು ರೂಪಿಸಿದ್ದ ವ್ಯಕ್ತಿಯನ್ನು ಅಲ್ಲಿನ ಭದ್ರತಾ ಪಡೆ ಶನಿವಾರ ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಿದೆ. ಆತನನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾಂತ್ಯದ (ಐಎಸ್ಕೆಪಿ) ತಥಾಕಥಿತ ಮುಖ್ಯಸ್ಥ ಅಬ್ದುಲ್ಲಾ ಯಾನೆ ಅಸ್ಲಾಂ ಫಾರೂಕಿ ಎಂದು ಗುರುತಿಸಲಾಗಿದೆ.
ಪಾಕಿಸ್ತಾನಿ ಪ್ರಜೆಯಾದ ಅಬ್ದುಲ್ಲಾ, ಈ ಹಿಂದೆ ನಿಷೇಧಿತ ಲಷ್ಕರ್ (ಎಲ್ಇಟಿ) ಹಾಗೂ ತೆಹ್ರಿಕ್ ಎ ತಾಲಿಬಾನ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ. ಹಕ್ಕಾನಿ ನೆಟ್ವರ್ಕ್ನ ಸೂಚನೆ ಮೇರೆಗೆ ಫಾರೂಕಿ, ಕೇರಳದ ಕಾಸರಗೋಡು ನಿವಾಸಿ ಮೊಹ್ಸಿನ್ ಹಾಗೂ ಇತರ ಮೂವರು ಗುರುದ್ವಾರದ ಮೇಲೆ ದಾಳಿ ನಡೆಸಿದ್ದರು.
ಈ ದಾಳಿಯಲ್ಲಿ 27 ಜನರು ಮೃತಪಟ್ಟಿದ್ದರು. ಮೊಹ್ಸಿನ್ ಕೂಡ ಈ ದಾಳಿಯಲ್ಲಿ ಮೃತನಾಗಿದ್ದ. ಕಾಬೂಲ್ನ ಭಾರತೀಯ ರಾಯಭಾರ ಕಚೇರಿ ಟಾರ್ಗೆಟ್ ಆಗಿತ್ತು.