ಕರಾವಳಿ 
ನ್ಯೂಸ್

Karavali - ಅಂದು "ಸು ಫ್ರಮ್​ ಸೋ', ಇಂದು ಹಾವಳಿ ಫ್ರಮ್​ "ಕರಾವಳಿ'?

Karavali -
ಕಳೆದ ವರ್ಷ ಜೆ.ಪಿ. ತೂಮಿನಾಡ್​ ನಟಿಸಿ, ನಿರ್ದೇಶಿಸಿದ್ದ "ಸು ಫ್ರಮ್​ ಸೋ' ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಕನ್ನಡದಲ್ಲಿ ನೂರು ಕೋಟಿ ಕ್ಲಬ್​ಗೆ ಎಂಟ್ರಿ ಕೊಟ್ಟಿದ್ದಲ್ಲದೇ, ಮಲಯಾಳಂನಲ್ಲೂ ಸ್ವಲ್ಪ ಮಟ್ಟಿಗೆ ಸದ್ದು ಮಾಡಿತ್ತು. 2025ರ ಜು. 25ರಂದು ಸಿನಿಮಾ ಬಿಡುಗಡೆಯಾಗಿದ್ದರೂ, ಬೆಂಗಳೂರಿನಲ್ಲಿ ಜು. 24ರಂದೇ 16 ಪ್ರೀಮಿಯರ್​ ಶೋಗಳು ಹೌಸ್​ಫುಲ್​ ಆಗಿದ್ದವು. ಇದೀಗ ಈ ಜು. 24ರಂದು "ಸು ಫ್ರಮ್​ ಸೋ'ನಂತೆಯೇ ಬಾಕ್ಸಾಫಿಸಿನಲ್ಲಿ ಮ್ಯಾಜಿಕ್​ ಮಾಡುವ ಭರವಸೆಯೊಂದಿಗೆ "ಕರಾವಳಿ' ತೆರೆಗೆ ಬರಲು ಸಿದ್ಧತೆ ನಡೆಸಿದೆ. ಗುರುದತ್​ ಗಾಣಿಗ ಆ್ಯಕ್ಷನ್-&ಕಟ್​ ಹೇಳುತ್ತಿರುವ ಈ ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​, ರಾಜ್​ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. "ಸು ಫ್ರಮ್​ ಸೋ'ನಲ್ಲಿ ಕರುಣಾಕರ ಗುರೂಜಿಯಾಗಿದ್ದ ರಾಜ್​, "ಕರಾವಳಿ'ಯಲ್ಲಿ ಮಾಸ್​ ಮಾದೇವನಾಗಿ ಮಿಂಚಲು ರೆಡಿಯಾಗಿದ್ದಾರೆ. ಪ್ರಜ್ವಲ್​ ದೇವರಾಜ್​ ಇದೇ ಮೊದಲ ಬಾರಿಗೆ ಸಂಪೂರ್ಣ ವಿಭಿನ್ನ ಶೇಡ್​ಗಳಲ್ಲಿ ಮಿಂಚಲಿದ್ದಾರೆ. ಶೀರ್ಷಿಕೆಯೇ ಹೇಳುವಂತೆ "ಕರಾವಳಿ' ಭಾಗದಲ್ಲಿ ಮನುಷ್ಯ ಮತ್ತು ಪ್ರಾಣಿ ಮಧ್ಯೆ ನಡೆಯುವ ಸಂರ್ಷದ ಕಥೆಯಾಗಿದ್ದು, ಈಗಾಗಲೇ ಸ್ಟ್​ ಲುಕ್​ ಮತ್ತು ಟೀಸರ್​ ನಿರೀೆ ಮೂಡಿಸಿದೆ. ಅಂದಹಾಗೆ ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ ಚಿತ್ರವನ್ನು ಅರ್ಪಿಸುತ್ತಿದ್ದು, ಜತೆಗೆ ವಿತರಣೆಯ ಜವಾಬ್ದಾರಿಯನ್ನೂ ಹೊತ್ತಿರುವುದು "ಕರಾವಳಿ' ತಂಡಕ್ಕೆ ಬಲ ಸಿಕ್ಕಂತಾಗಿದೆ. ಪ್ರಜ್ವಲ್​, ರಾಜ್​ ಜತೆ ಸಂಪದಾ, ಮಿತ್ರಾ, ರಮೇಶ್​ ಇಂದಿರ, ಶ್ರೀಧರ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಸಚಿನ್​ ಬಸ್ರೂರು ಸಂಗೀತ, ಅಭಿಮನ್ಯು ಸದಾನಂದನ್​ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬರುತ್ತಿದೆ.
"ಕರಾವಳಿ' ಇದುವರೆಗೂ ತೆರೆ ಮೇಲೆ ನೋಡಿರದ ಪ್ರಾಮಾಣಿಕ ಪ್ರಯತ್ನ. "ಸು ಫ್ರಮ್​ ಸೋ' ಬಿಡುಗಡೆಯಾದ ಸಮಯದಲ್ಲೇ ನಮ್ಮ ಚಿತ್ರವೂ ತೆರೆಗೆ ಬರುತ್ತಿರುವುದು ಕಾಕತಾಳೀಯ. ಆದರೆ, ಥಿಯೇಟರ್​ಗೆ ಬರುವ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಭರವಸೆಯಿದೆ. - ಗುರುದತ್​ ಗಾಣಿಗ, ನಿರ್ದೇಶಕ