ರಾಣೆಬೆನ್ನೂರ: ಸಾವಿರಾರು ವಿದ್ಯಾಥಿರ್ಗಳಿಗೆ ಶಿಕ್ಷಣವನ್ನು ಧಾರೆ ಎರೆದು, ಉನ್ನತ ಜೀವನ ಕಟ್ಟಿಕೊಟ್ಟ ಬಿ.ಕೆ. ಗುಪ್ತಾ ಪಿಯು ಮಹಾವಿದ್ಯಾಲಯದ ಇತಿಹಾಸದಲ್ಲಿಯೆ ಮೊದಲ ಬಾರಿಗೆ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿರುವ ಹಳೆಯ ವಿದ್ಯಾಥಿರ್ಗಳ ಕಾರ್ಯ ಮೆಚ್ಚುಗೆ ಪಡುವಂತಹದ್ದು ಎಂದು ಪ್ರಾಚಾರ್ಯ ಕುಮಾರ ಡಿ.ಕೆ. ಹೇಳಿದರು.
ನಗರದ ಬಿ.ಕೆ. ಗುಪ್ತಾ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2013&-14ನೇ ಸಾಲಿನ ವಿದ್ಯಾಥಿರ್ಗಳಿಂದ ಭಾನುವಾರ ಏರ್ಪಡಿಸಿದ್ದ ಗುರುವಂದನಾ ಹಾಗೂ ದಶಮಾನೋತ್ಸವ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ಉಪನ್ಯಾಸಕನಿಗೆ ತನ್ನ ಜೀವನದ ಸಾರ್ಥಕ ಅಂದರೆ ತಾನು ಧಾರೆ ಎರೆದ ಶಿಕ್ಷಣವು ವಿದ್ಯಾಥಿರ್ಗಳ ಜೀವನ ಕಟ್ಟಿಕೊಂಡಾಗ ಮಾತ್ರ ಸಾರ್ಥಕ. ಹಿಂದಿನ ವಿದ್ಯಾಥಿರ್ಗಳು ಫ್ಯೂಚರ್ ಹಿಂದೆ ಹೋಗಿ ಜೀವನ ರೂಪಿಸಿಕೊಂಡರು. ಆದರೆ, ಇಂದಿನ ವಿದ್ಯಾಥಿರ್ಗಳು ಪಿಕ್ಚರ್ ಹಿಂದೆ ಹೋಗುತ್ತಿರುವುದು ದುರಂತವಾಗಿದೆ. ಇದು ಬದಲಾಗಬೇಕು ಎಂದರು.
ಗುರುವಂದನೆ ಸ್ವೀಕರಿಸಿದ ರಾಜ್ಯಶಾಸ್ತ್ರ ಉಪನ್ಯಾಸಕ ಎಂ.ಡಿ. ಹೊನ್ನಮ್ಮವರ ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನೀವು ಓದುವುದು ಮಾತ್ರವಲ್ಲದೆ ಶಿಕ್ಷಣದಿಂದ ದೂರ ಉಳಿದ ಎಲ್ಲರನ್ನು ಗುರುತಿಸಿ ಅವರಿಗೆ ಶಿಕ್ಷಣದ ಅರಿವು ಮೂಡಿಸಬೇಕು ಎಂದರು.
ಉಪನ್ಯಾಸಕರಾದ ಎಂ.ವೈ. ಕುಸಗೂರು, ಯು.ಜಿ. ಸೊರಟೂರು, ವೈ.ಎಚ್. ವಡೇರಹಳ್ಳಿ, ಪಾಂಡ್ಯಾನಾಯ್ಡು ಪೊರೇಪ್ಪನವರ, ಗೀತಾ ಸಾವಕಾರ, ಜಯಲಕ್ಷಿ$್ಮ ಪುಲ್ಲಾಪುರ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಜೆಸಿಐ ಅಧ್ಯಕ್ಷ ಕುಮಾರ ಬೆಣ್ಣಿ, ನಿವೃತ್ತ ಪ್ರಾಚಾರ್ಯ ಎಸ್.ವಿ. ಹಳ್ಳಪ್ಪಗೌಡರ, ಹಳೆಯ ವಿದ್ಯಾಥಿರ್ಗಳಾದ ಬೀರೇಶ ಬುಡ್ಡಳ್ಳರ, ಬಸವರಾಜ ಎಸ್., ಪ್ರಮುಖರಾದ ಸಚಿನ ಚಲವಾದಿ, ಸಿದ್ದು ಉಜ್ಜನಗೌಡರ, ಶಿವಕುಮಾರ ಕರಿಯಜ್ಜಿ, ಕುಮಾರ ಕರಡಿ, ವಿನಾಯಕ ನಾಯಕ, ದೇವರಾಜ ನೂಕಾಪುರ, ಜಗದೀಶ ಯಲ್ಲಾಪುರ, ಮಾಲತೇಶ ಕುರವತ್ತಿ, ಅರುಣ ಲಮಾಣಿ, ರೇಖಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.