ಜಯಶ್ರೀ ಹೆಸರಿನಿಂದಲೇ ಫೇಮಸ್ ಆಗಿರುವ ನಟಿ ಜ್ಯೋತಿ ರೈ, ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತ ಮುಖ. ಜನಪ್ರಿಯ ಧಾರಾವಾಹಿ ಗುಪ್ಪೆದಂತ ಮನಸು ಧಾರಾವಾಹಿಯಲ್ಲಿ 'ಜಗತಿ ಮೇಡಂ' ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ.
ಈ ಹಿಂದೆಯೇ ಒಂದು ಮದುವೆಯಾಗಿರುವ ನಟಿ ಜ್ಯೋತಿ ರೈ, ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಸಹಜೀವನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ವಿಚಾರವನ್ನ ಹಂಚಿಕೊಂಡಿದ್ದಾರೆ.
ಕಿರುತೆರೆ ಬ್ಯೂಟಿ ಜ್ಯೋತಿ ರೈ ಇತ್ತೀಚಿಗೆ ಬೋಲ್ಡ್ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ನಟಿ ಎಂಗೇಜ್‌ಮೆಂಟ್ ಆಗಿರುವ ವಿಚಾರವನ್ನು ರಿವೀಲ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ಜ್ಯೋತಿ ರೈ ಇದೀಗ ಅವರು ಮತ್ತು ಸುಕು ಅಂತಿಮವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಜ್ಯೋತಿ ಸುಕು ಜೊತೆ ಹಂಚಿಕೊಂಡಿರುವ ಫೋಟೋಗಳು.
ಕೆಲ ದಿನಗಳ ಹಿಂದೆ ಜ್ಯೋತಿ ರೈ ಮತ್ತು ಸುಕು ಪೂರ್ವಜ್ ಅವರ ಸಂಬಂಧದ ಬಗ್ಗೆ ವದಂತಿಗಳು ಹರಡಿತ್ತು. ಜ್ಯೋತಿ 20 ವರ್ಷ ವಯಸ್ಸಿನವರಾಗಿದ್ದಾಗ, ಪದ್ಮನಾಭ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು.
ಅವರಿಬ್ಬರಿಗೂ ಒಬ್ಬ ಮಗನೂ ಇದ್ದಾನೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದ ದಂಪತಿಗಳು ಬೇರ್ಪಟ್ಟಿದ್ದು, ಸುಕು ಪೂರ್ವಜ್ ಅವರನ್ನು ಭೇಟಿಯಾದ ನಂತರ, ಜ್ಯೋತಿ ರೈ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಜ್ಯೂತಿ ತಮ್ಮ ಕುಟುಂಬಸ್ಥರು, ಸ್ನೇಹಿತರು ಮತ್ತು ಅನುಯಾಯಿಗಳಿಗೆ ಜೊತೆಗೆ ಫ್ಯಾನ್ಸ್ಗೆ ಬಹಳ ಬೇಗನೆ ತಮ್ಮ ಮತ್ತು ಸುಖ್ ಪೂರ್ವಜ್ ಸಂಬಂಧದ ಬಗ್ಗೆ ತಿಳಿಸಲು ಇಚ್ಛಿಸಿದ್ದು, ತಮ್ಮಿಬ್ಬರ ಫೋಟೋಗಳನ್ನ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಜ್ಯೋತಿ ಅವರು ನಟಿಸುತ್ತಿರುವ ವೆಬ್ಸಿರೀಸ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಫಸ್ಟ್ ಲುಕ್ ಪೋಸ್ಟರ್ನಲ್ಲಿ ತಮ್ಮ ಹೆಸರನ್ನು ಜ್ಯೋತಿ ಪೂರ್ವಜ್ ಎಂದು ಬದಲಾಯಿಸಿಕೊಂಡಿದ್ದಾರೆ.