ಛತ್ತೀಸ್‌ಗಢ: ಗರಿಯಾಬಂದ್ ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 14 ನಕ್ಸಲರು(Naxals) ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಓರಿಸ್ಸಾ ಗಡಿಯಲ್ಲಿ ಜ.21ರಿಂದ ನಡೆಯುತ್ತಿರು ಗುಂಡಿನ ಕಾರ್ಯಚರಣೆ ಮುಂದುವರೆದಿದ್ದು, ಮೃತರಲ್ಲಿ ಇಬ್ಬರು ಮಹಿಳಾ ನಕ್ಸಲರು ಸೇರಿದ್ದಾರೆ. ಅಲ್ಲದೇ, 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲನು ಹತನಾಗಿದ್ದಾನೆ. ನಕ್ಸಲರು ಬಳಸುತ್ತಿದ್ದ ವಿವಿಧ ರೀತಿಯ ಮದ್ದಗುಂಡು ಸೇರಿ ಬಂದೂಕುಗಳನ್ನು ಕಾರ್ಯಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಇದನ್ನೂ ಓದಿ: Shree Nandi Utsava Veg Restaurant | ಟೇಸ್ಟಿ ಐಟಮ್ಗಳಿಗೆ ಫೇಮಸ್ ಶ್ರೀ ನಂದಿ ಉತ್ಸವ ವೆಜ್ ರೆಸ್ಟೋರೆಂಟ್
ಛತ್ತೀಸ್‌ಗಢ ಡಿಸಿಎಂ ಅರುಣ್ ಸಾವೊ ನಕ್ಸಲ್ ಕಾರ್ಯಚರಣೆಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "2026ರ ಮಾ.31ರೊಳಗೆ ನಾವು ರಾಷ್ಟ್ರವನ್ನು ನಕ್ಸಲ್ ಮುಕ್ತಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ನಮ್ಮ ಭದ್ರತಾ ಪಡೆಗಳು ಈ ದಿಕ್ಕಿನಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸುತ್ತಿವೆ. ಅವರು ನಿರಂತರವಾಗಿ ಯಶಸ್ವಿಯಾಗುತ್ತಿದ್ದಾರೆ. ನಾನು ಭದ್ರತಾ ಪಡೆಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)