ನವದೆಹಲಿ: ಇತ್ತೀಚಿಗೆ ನಡೆದ ಚೆಸ್ ಆಟದಲ್ಲಿ ವಿಶ್ವ ಚಾಂಪಿಯನ್ ಶಿಪ್ ಆಗಿ ಹೊರ ಹೊಮ್ಮಿದ ತಮಿಳುನಾಡಿನ ಡಿ.ಗುಕೇಶ್(Gukesh) ಅವರ ವಿದ್ಯಾಭ್ಯಾಸದಲ್ಲಿನ ಕೆಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಅವರ ತಾಯಿ ಮಾಡಿದ್ದಾರೆ.
ಅಲ್ಲದೇ, ಗುಕೇಶ್ ಶಿಕ್ಷಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪದೇಪದೆ ಚರ್ಚಿಸಲಾಗುತ್ತದೆ. ಅವರು 5ನೇ ತರಗತಿವರೆ ಓದಿದ್ದಾರೆ. ಅಲ್ಲಿಂದ ಶಿಕ್ಷಣ ಮೊಟಕುಗೊಳಿಸಿದ್ದಾರೆ ಎಂದು ಕೆಲವರು ಮತ್ತು ಇನ್ನೂ ಕೆಲವರು ಅವರು ಕನಿಷ್ಠ ಪಿಯು ಆದರೂ ಮುಗಿದ್ದಾರೆ ಯಾಕೆ ಸುಳ್ಳು ಮಾಹತಿ ಹರಡಿತ್ತಿದ್ದಿರಿ ಎಂದು ಅಗ್ಗಾಗೆ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಗುಕೇಶ್ ಪಾಲಕರು ಇದಕ್ಕೆಲ್ಲ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಕೇಶ್ ಅವರ ಗಮನಾರ್ಹ ಬೆಳವಣಿಗೆ (ಪ್ರಯಾಣ) ಇಡೀ ಪ್ರಪಂಚದ ಮೆಚ್ಚುಗೆಯನ್ನು ಗಳಿಸಿದೆ. ಈ ಪ್ರಯಾಣದ ಆರಂಭದಿಂದ ಕೊನೆಯವರೆಗೂ ಗುಕೇಶ್ ಪಾಲಕರ ಬೆಂಬಲ ಮತ್ತು ಅವರ ತ್ಯಾಗದ ಮೇಲೆ ಬೆಳಕು ಚೆಲ್ಲುತ್ತದೆ. ಗುಕೇಶ್ ಅವರ ತಾಯಿ ಪದ್ಮಾ ಕುಮಾರಿ ಮಗನ ಚೇಸ್ ಪ್ರಯಾಣದ ಬಗ್ಗೆ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
5ನೇ ತರಗತಿಗೆ ವಿದ್ಯಾಭ್ಯಾಸ ಮೊಟುಕು
''ಗುಕೇಶ್ 5ನೇ ತರಗತಿಯಲ್ಲಿ ಓದುತ್ತಿರುವಾಗ ಅವರ ತಂದೆ ಒಂದು ಕಠಿಣ ನಿರ್ಧಾರವನ್ನು ತಗೆದುಕೊಂಡರು. ಗುಕೇಶ್ ಚೇಸ್ನಲ್ಲಿ ಆಸಕ್ತಿ ನೋಡಿ, ಇನ್ನು ಶಾಲೆ ಸಾಕು ಇದಲ್ಲಿಯೇ ಮುಂದುವರೆಯುವಂತೆ ಅವನಿಗೆ ಹೇಳಿದರು. ಇದಕ್ಕೆ ಎಲ್ಲರೂ ವಿರುದ್ಧವಾಗಿದ್ದರು ಅವರು ಮಾತ್ರ ಈ ನಿರ್ಧಾರದಲ್ಲಿ ಹಿಂದೆ ಸರಿಯದೆ ಅಚಲವಾಗಿದ್ದರು. ಒಂದು ವೇಳೆ ಚೇಸ್ನಲ್ಲಿ ಅವನು ಮುಂದುವರೆಯದಿದ್ದರೆ ಜೀವನ ಪರಿಸ್ಥಿತಿ ಏನಾಗುತ್ತೆ ಎಂದು ಅಕ್ಕಪಕ್ಕದವರು, ಸಂಬಂಧಿಕರು ಎಲ್ಲರೂ ಈ ವಿಷಯದಲ್ಲಿ ನಮ್ಮ ವಿರುದ್ಧ ನಿಂತರು. ಆದರೆ, ನಮಗೆ ಅವನ ಭವಿಷ್ಯ ನಿರ್ಮಿಸುವ ಕನಸು ಹೊಂದಿದ್ದೇವು'' ಎಂದುಬ ಪದ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ದೆಹಲಿ ಜನರನ್ನು ದ್ವೇಷಿಸುತ್ತಿದೆ; ಕೇಂದ್ರದ ವಿರುದ್ಧ ಅರವಿಂದ್ ಕೇಜ್ರಿವಾಲ್ ಆರೋಪ | Arvind Kejriwal
ಗುಕೇಶ್ನನ್ನು ನಾವೇ ಶಾಲೆ ಬಿಡಿಸಿದ್ದರಿಂದ ನಮಗೆ ಲೆಕ್ಕವಿಲ್ಲದಷ್ಟು ಅವಮಾನಗಳಾಗಿವೆ. ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡದಿದ್ದಾಗ ಅವನ್ನು ಪ್ರಶ್ನೆ ಮಾಡಿದ್ದೇವೆ. ಆದರೆ, ಕೆಲ ಸಂದರ್ಭಗಳಲ್ಲಿ ಅಪ್ಪಿಕೊಂಡಿದ್ದೇವೆ. ಇದೆಲ್ಲ ಸವಾಲುಗಳ ನಡುವೆ ನಾವು ಅವನ ಸಾಮರ್ಥ್ಯದ ಬಗ್ಗೆ ಎಂದು ಅನುಮಾನಿಸಿಲ್ಲ ಮತ್ತು ಅವಮಾನಿಸಿಲ್ಲ. ಶಾಲೆಗಿಂತ ಚೇಸ್ಗೆ ಆಡುವ ಅದ್ಯತೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).