ನ್ಯೂಸ್

ಗುಜರಾತ್​ ಮಳೆ: ಮನೆ ಮೇಲೇರಿ ಕುಳಿತ ಮೊಸಳೆ!

ಗಾಂಧಿನಗರ: ಗುಜರಾತ್ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ವಡೋದರಾದಲ್ಲಿ 10 ರಿಂದ 12 ಅಡಿ ಪ್ರವಾಹದ ನೀರು ನಿಂತಿದೆ. ಈ ನೀರಿನಲ್ಲಿ ಬಂದ ಮೊಸಳೆಯೊಂದು ಅಕೋಟಾ ಸ್ಟೇಡಿಯಂ ಬಳಿಯ ಮನೆಯೊಂದರ ಮೇಲೆ ಏರಿ ಕುಳಿತಿದೆ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್​ ಆಗಿರುವ ವೀಡಿಯೋದಲ್ಲಿ ಮೊಸಳೆ ಹೆಂಚು ಮತ್ತು ಸಿಮೆಂಟ್​ ಶೀಟ್​ ಹಾಕಿ ಕಟ್ಟಿರುವ ಮನೆ ಮೇಲೆ ಯಾರ ಭಯವೂ ಇಲ್ಲದೆ ಮೊಸಳೆ ನಿದ್ರಿಸುತ್ತಿರುವುದನ್ನು ಕಾಣಬಹುದಾಗಿದೆ.

ಮಳೆ ಎಡೆ ಬಿಡದೆ ಸುರಿಯುತ್ತಿದ್ದು, ವಡೋದರಾ ಪ್ರವಾಹದ ನೀರಿನಲ್ಲಿ ಮುಳುಗಿದೆ. ಬಹುಷಃ ಮನೆ ಮುಳಿಗಿದ್ದು, ಮನೆಮಂದಿ ಬೇರೆಡೆ ಸ್ಥಳಾಂತರಗೊಂಡಿರಬಹುದು. ಹೀಗಾಗಿಯೇ ಮೊಸಳೆ ಯಾವುದೇ ಭಯವಿಲ್ಲದೆ ವಿರಮಿಸುತ್ತಿದೆ.

ಇನ್ನು ಗುಜರಾತ್​ನಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 35 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಸಾವಿರಾರು ಜನರು ನಿರಾಶ್ರಿತರಾದರು. ಅವರೆಲ್ಲರೂ ಮನೆಯ ಛಾವಣಿಯನ್ನು ಹತ್ತಿ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಇವರನ್ನು ರಕ್ಷಿಸಲು ಎನ್‌ಡಿಆರ್‌ಎಫ್, ಎಸ್‌ಟಿಆರ್‌ಎಫ್, ಭಾರತೀಯ ಸೇನೆ ಮತ್ತು ಪೊಲೀಸ್ ಇಲಾಖೆ ಫೀಲ್ಡ್‌ ಮಾಡಿದೆ. ಈಗಾಗಲೇ ಸುಮಾರು 20 ಸಾವಿರ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.