ಗುಜರಾತ್: ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ವೇದಿಕೆ ಮೇಲೆ ಕುಸಿದುಬಿದ್ದ ಘಟನೆ ವಡೋರಾದಲ್ಲಿ ಸಂಭವಿಸಿದೆ.
ಫೆ.21ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಪ್ರಯುಕ್ತ ಇಂದು(ಭಾನುವಾರ) ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳಿದ್ದರು. ಪ್ರಚಾರದ ವೇಳೆ ಭಾಷಣ ಮಾಡುತ್ತಿದ್ದ ವಿಜಯ್ ರೂಪಾಣಿ ಅವರಿಗೆ ಬಂದು ಕುಸಿದು ಬಿದ್ದರು. ಬಿದ್ದ ಕೆಲವೇ ಕ್ಷಣದಲ್ಲಿ ಪ್ರಜ್ಞೆ ಬಂದಿದ್ದು, ಅಹಮದಾಬಾದ್ನ ಮೆಹ್ತಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೂಲಗಳ ಪ್ರಕಾರ ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಒತ್ತಡದಿಂದ ತಲೆಸುತ್ತು ಬಂದು ಕುಸಿದು ಬಿದ್ದರು ಎಂದು ಹೇಳಲಾಗಿದೆ.