Gandhinagar: ಶುಕ್ರವಾರ (ಅ 16) ನಡೆಯಲಿರುವ ಸಚಿವ ಸಂಪುಟ ಪುನಾರಚೆನೆಗೆ ಮುನ್ನ ಗುಜರಾತ್ ಸರ್ಕಾರದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದು, ಹೊಸ ಸಂಪುಟಕ್ಕೆ ಹಿಂದಿನ ಸುಮಾರು ಏಳರಿಂದ ಹತ್ತು ಸಚಿವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದ್ದು, ಅಂತಹವರ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಲಾಗುವುದಿಲ್ಲ ಎಂದು ವರದಿಯಾಗಿದೆ.
ಈ ಹಿಂದಿನ ಗುಜರಾತ್ ಸಚಿವ ಸಂಪುಟದಲ್ಲಿ 17 ಸಚಿವರು ಅಧಿಕಾರ ನಡೆಸುತ್ತಿದ್ದರು, ಅದನ್ನು 26 ಕ್ಕೆ ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಸಚಿವ ಸಂಪುಟದಲ್ಲಿ ಅಧಿಕಾರದಲ್ಲಿ ಮುಂದುವರಿದ ಏಕೈಕ ಸದಸ್ಯರು ಎಂದರೇ ಅದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಅವರು ಕೂಡ ಇಂದು ರಾತ್ರಿ (ಅ 16) ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿ ಔಪಚಾರಿಕವಾಗಿ ರಾಜೀನಾಮೆ ಸಲ್ಲಿಸುವ ನಿರೀಕ್ಷೆಯಿದೆ. ಗುಜರಾತ್‌ನ ನೂತನ ಸಚಿವ ಸಂಪುಟವು ಶುಕ್ರವಾರ (ಅ 17) ಬೆಳಿಗ್ಗೆ 11.30 ಕ್ಕೆ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ. ಹೊಸ ತಂಡವು ಯುವ ಮತ್ತು ಅನುಭವಿ ನಾಯಕರ ಮಿಶ್ರಣವಾಗಿದ್ದು, ಎಲ್ಲಾ ಸಮುದಾಯಗಳಲ್ಲಿ ಜಾತಿ ಸಮತೋಲನವನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿದೆ ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಧೂಮಪಾನ, ಮದ್ಯಪಾನಕ್ಕಿಂತಲೂ ತುಂಬಾ ಡೇಂಜರ್ ಅಂತೆ ಈ ವ್ಯಸನ… ಸಂತೋಷವನ್ನೇ ಕಿತ್ತುಕೊಳ್ಳುತ್ತೆ ಎಚ್ಚರ! Addiction
ಗುರುವಾರ ಸಂಜೆ ಮುಖ್ಯಮಂತ್ರಿ ಪಟೇಲ್ ನಿವಾಸದಲ್ಲಿ ನಡೆದ ಸಭೆಯ ನಂತರ ಈ ಕ್ಷಿಪ್ರ ಬೆಳವಣಿಗೆ ನಡೆದಿದ್ದು, ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸುನಿಲ್ ಬನ್ಸಾಲ್ ಮತ್ತು ಮುಖ್ಯಮಂತ್ರಿ ಪಟೇಲ್ ಭಾಗವಹಿಸಿದ್ದರು. ಮೂಲಗಳ ಪ್ರಕಾರ, ಬನ್ಸಾಲ್ ಮತ್ತು ಪಟೇಲ್ ಅವರು ಪ್ರತಿಯೊಬ್ಬ ಸಚಿವರನ್ನು ಪ್ರತ್ಯೇಕವಾಗಿ ಭೇಟಿಯಾಗಿ, ತಮ್ಮ ರಾಜೀನಾಮೆಗಳನ್ನು ಪಡೆಯುವ ಮೊದಲು ಕೇಂದ್ರ ನಾಯಕರ ನಿರ್ಧಾರವನ್ನು ತಿಳಿಸಿದರು. ಗುಜರಾತ್ ಬಿಜೆಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ, ಈ ಪ್ರಕ್ರಿಯೆಯನ್ನು ಸಂಘಟಿಸಿ ನಾಯಕತ್ವದ ನಿರ್ಧಾರವನ್ನು ಸಚಿವರಿಗೆ ತಿಳಿಸಿದರು ಎಂದು ಮಾಹಿತಿ ನೀಡಿದ್ದಾರೆ. ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಸಮತೋಲನಗೊಳಿಸುವ ಮತ್ತು ಹೊಸ ಶಕ್ತಿಯನ್ನು ತುಂಬುವ ಬಿಜೆಪಿಯ ವಿಶಾಲ ಕಾರ್ಯತಂತ್ರದ ಭಾಗವಾಗಿ ಈ ಪುನಾರಚನೆಯನ್ನು ನೋಡಲಾಗುತ್ತಿದೆ.(ಏಜೆನ್ಸೀಸ್)