ಅಹಮದಾಬಾದ್: ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಅಪಾರ್ಟ್ಮೆಂಟ್ ಒಂದರ ಖಾಲಿ ಫ್ಲ್ಯಾಟ್ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಸಹೋದರರಾದ ಅಮ್ರಿಶ್ ಪಟೇಲ್ (42), ಗೌರಂಗ್ ಪಟೇಲ್ (40) ಹಾಗೂ ನಾಲ್ವರು ಮಕ್ಕಳಾದ ಕೀರ್ತಿ (9), ಸಾನ್ವಿ (7), ಮಯೂರ್ (12) ಮತ್ತು ಧ್ರುವ (12) ಎಂದು ಗುರುತಿಸಲಾಗಿದೆ. ಅಹಮದಾಬಾದ್ನಲ್ಲಿರುವ ವತ್ವಾ ಜಿಐಡಿಸಿ ಏರಿಯಾದ ತಮ್ಮದೇ ಫ್ಲ್ಯಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆಂದು ವಾತ್ವಾ ಜಿಐಡಿಸಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಡಿ.ಆರ್. ಗೊಹಿಲ್ ತಿಳಿಸಿದ್ದಾರೆ. ಇದನ್ನೂ ಓದಿ: VIDEO| ನಮ್ಮ ಯೋಧರನ್ನು ಕೊಂದ ಚೀನಾಗೆ ಪಾಠ ಕಲಿಸಲು ಗಡಿಯತ್ತ ಬಾಲಕರ ಪ್ರಯಾಣ: ಮುಂದೇನಾಯ್ತು?
ಪೊಲೀಸ್ ಅಧಿಕಾರಿಯ ಪ್ರಕಾರ ಪಟೇಲ್ ಸಹೋದರರು ನಗರದ ಬೇರೆ ಸ್ಥಳದಲ್ಲಿ ವಾಸವಿದ್ದರು. ಜೂನ್ 17ರಂದು ತಮ್ಮ ತಮ್ಮ ಹೆಂಡತಿಯರಿಗೆ ಮಕ್ಕಳೊಂದಿಗೆ ಹೊರ ಹೋಗಿ ಬರುತ್ತೇವೆ ಎಂದು ಹೇಳಿ ಮನೆ ಬಿಟ್ಟಿದ್ದರು. ಆದರೆ, ಗುರುವಾರ ರಾತ್ರಿ ಮರಳಿ ಬರದಿದ್ದಾಗ, ಇಬ್ಬರ ಪತ್ನಿಯರು ಖಾಲಿಯಿದ್ದ ಪ್ಲ್ಯಾಟ್ ಹೋಗಿ ನೋಡಿದ್ದಾರೆ. ಈ ವೇಳೆ ಒಳಗಡೆಯಿಂದ ಲಾಕ್ ಮಾಡಿರುವುದನ್ನು ಗಮನಿಸಿ ಗುರುವಾರ ಮಧ್ಯರಾತ್ರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಮಕ್ಕಳಿಗೆ ಆಹಾರದಲ್ಲಿ ನಿದ್ದೆ ಮಾತ್ರೆಗಳನ್ನು ನೀಡಿ ಅವರನ್ನು ನೇಣು ಹಾಕಿದ ಬಳಿಕ ಸಹೋದರರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸಹೋದರರಿಬ್ಬರ ಮೃತದೇಹ ಡ್ರಾಯಿಂಗ್ ರೂಮ್ನಲ್ಲಿ ಪತ್ತೆಯಾದರೆ, ಸಾನ್ವಿ ಮತ್ತು ಕೀರ್ತಿ ದೇಹಗಳು ಅಡುಗೆ ಕೋಣೆಯಲ್ಲಿ ಕಂಡುಬಂದಿದೆ. ಉಳಿದ ಮಯೂರ್ ಮತ್ತು ಧ್ರುವ ದೇಹಗಳು ಬೆಡ್ರೂಮ್ನಲ್ಲಿ ಪತ್ತೆಯಾಗಿವೆ. ಎಲ್ಲರೂ ಸಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: ಯುವತಿಯರೇ ಹುಷಾರ್ ಇಂಥವರು ಇರ್ತಾರೆ: ಈತನ ಖತರ್ನಾಕ್ ಬುದ್ಧಿ ಗೊತ್ತಾದ್ರೆ ಬೆರಗಾಗ್ತೀರಾ…!
ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ವರದಿಗಾಗಿ ಕಾಯಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)